ರಾಮನಗರ(ಬೆಂಗಳೂರು ದಕ್ಷಿಣ): ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಅಪ್ರಾಪ್ತನನ್ನು ಮದುವೆಯಾದ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 11ರಂದು ಮಾಗಡಿ ತಾಲೂಕಿನ ಆಲೂರು ಚೌಡೇಶ್ವರಿ ದೇವಾಲಯದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಸೋಮನತ್ತನಹಳ್ಳಿಯ ಸೌಮ್ಯಾ(19) ಮತ್ತು 19 ವರ್ಷ ಪೂರ್ಣವಾಗದ ಅಪ್ರಾಪ್ತನ ಮದುವೆಯಾಗಿದೆ. ಕಾನೂನಿನ ಪ್ರಕಾರ ಮದುವೆಯಾಗಲು ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ತುಂಬಿರಬೇಕು. ಆದರೆ ಯುವಕನಿಗೆ 19 ವರ್ಷ ವಯಸ್ಸು ತುಂಬಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಪ್ರಾಪ್ತನನ್ನು ಮದುವೆಯಾದ ಯುವತಿ ಹಾಗೂ ಅವರ ಮದುವೆಗೆ ಅವಕಾಶ ನೀಡಿದ ಆಲೂರು ಚೌಡೇಶ್ವರಿ ದೇವಾಲಯದ ಅರ್ಚಕನ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.