HomeKarnatakaಜನಸಾಮಾನ್ಯರಿಗೆ ಬಿಗ್ ಶಾಕ್: ಶತಕ ತಲುಪಿದ ಅಕ್ಕಿ ದರ, ಕೆಜಿಗೆ 95 -100 ರೂ.

ಜನಸಾಮಾನ್ಯರಿಗೆ ಬಿಗ್ ಶಾಕ್: ಶತಕ ತಲುಪಿದ ಅಕ್ಕಿ ದರ, ಕೆಜಿಗೆ 95 -100 ರೂ.

ಬೆಂಗಳೂರು: ರಾಜ್ಯದಲ್ಲಿ ಅಕ್ಕಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಒಂದು ಕೆಜಿ ಅಕ್ಕಿ ದರ 100 ರೂಪಾಯಿ ಸಮೀಪಕ್ಕೆ ಬಂದಿದೆ.

ಸ್ಟೀಮ್ ರೈಸ್ ಸಗಟು ದರ ಕೆಜಿಗೆ 65 ರಿಂದ 70 ರೂ., ಚಿಲ್ಲರೆ ದರ 75 ರಿಂದ 80 ರೂ. ಇದೆ.

ಸೋನಾ ಮಸೂರಿ ಸಗಟು ದರ ಕೆಜಿಗೆ 75 ರಿಂದ 85 ರೂ., ಚಿಲ್ಲರೆ ದರ 90 ರಿಂದ 95 ರೂ.ಇದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀರಾ ರೈಸ್ ಸಗಟು ದರ 85 ರಿಂದ 90 ರೂ., ಚಿಲ್ಲರೆ ದರ 95 ರಿಂದ 100 ರೂ.ಗೆ ತಲುಪಿದೆ.

ಜನರು ಅತಿ ಹೆಚ್ಚಾಗಿ ಬಳಕೆ ಮಾಡುವ ಸೋನಾಮಸೂರಿ ರಾ ರೈಸ್ ದರ ಕೆಜಿಗೆ 95 ರೂಪಾಯಿಗೆ ತಲುಪಿದೆ. ಕಳೆದ 20 ದಿನಗಳ ಅವಧಿಯಲ್ಲಿ ಅಕ್ಕಿ ದರ ಭಾರಿ ಏರುಗತಿಯಲ್ಲಿ ಸಾಗಿದೆ. ಬೆಲೆಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಸಗಟು ವ್ಯಾಪಾರಿಗಳು ಪ್ರತಿ ದಿನ ಏರಿಕೆ ಮಾಡುವುದನ್ನು ಕಂಡು ಚಿಲ್ಲರೆ ವ್ಯಾಪಾರಿಗಳೇ ಕಂಗಾಲಾಗಿದ್ದಾರೆ.

ಗ್ರಾಹಕರನ್ನು ಕಳೆದುಕೊಳ್ಳಲು ಬಯಸದ ಕೆಲವು ಅಂಗಡಿಯವರು ಲಾಭದ ಪ್ರಮಾಣ ಕಡಿಮೆ ಮಾಡಿಕೊಂಡು ಅಕ್ಕಿ ಮಾರಾಟ ಮಾಡುತ್ತಿದ್ದು, ಮತ್ತೆ ಕೆಲವರು ಸಗಟು ದರಕ್ಕಿಂತ ಕನಿಷ್ಠ ಕೆಜಿಗೆ 10 ರೂಪಾಯಿವರೆಗೆ ಏರಿಕೆ ಮಾಡಿದ್ದಾರೆ.

ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 2026ನೇ ಸಾಲಿನ ಬೇಸಿಗೆಯಲ್ಲಿ ಕ್ರಸ್ಟ್ ಗೇಟ್ ಅಳವಡಿಕೆ ಕಾರಣದಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಭಾಗದಲ್ಲಿ ಭತ್ತ ಬೆಳೆದಿರಲಿಲ್ಲ. ಅದರ ಹಿಂದಿನ ಮುಂಗಾರು ಹಂಗಾಮಿನಲ್ಲಿಯೂ ನಿರೀಕ್ಷೆಯಷ್ಟು ಭತ್ತ ಬೆಳೆದಿರಲಿಲ್ಲ. ರಾಜ್ಯದಲ್ಲಿ ಬೆಳೆದ ಭತ್ತವನ್ನು ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗಿದೆ. ಈ ಕಾರಣದಿಂದ ಭತ್ತದ ತೀವ್ರ ಕೊರತೆಯಾಗಿ ಅಕ್ಕಿ ದರ ಏರಿಕೆಯಾಗುತ್ತಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular