HomeLive Newsಜನಸಾಮಾನ್ಯರಿಗೆ ಬಿಗ್ ಶಾಕ್:  ಇತಿಹಾಸದಲ್ಲೇ ಕಂಡು ಕೇಳದಷ್ಟು ದುಬಾರಿಯಾದ ತೆಂಗಿನಕಾಯಿ, ಎಳನೀರು

ಜನಸಾಮಾನ್ಯರಿಗೆ ಬಿಗ್ ಶಾಕ್:  ಇತಿಹಾಸದಲ್ಲೇ ಕಂಡು ಕೇಳದಷ್ಟು ದುಬಾರಿಯಾದ ತೆಂಗಿನಕಾಯಿ, ಎಳನೀರು

ಬೆಂಗಳೂರು: ತೆಂಗಿನಕಾಯಿ ದರ ಮತ್ತೆ ಏರಿಕೆಯಾಗಿದ್ದು, ಕೆಜಿಗೆ 100 ರೂಪಾಯಿ ಗಡಿಯತ್ತ ಸಾಗಿದೆ. ಇತಿಹಾಸದಲ್ಲಿ ಕಂಡು ಕೇಳದಷ್ಟು ದುಬಾರಿಯಾಗಿರುವ ತೆಂಗಿನ ಕಾಯಿ ಬೆಲೆ ಏರುಗತಿಯಲ್ಲಿ ಸಾಗಿದ್ದು, ಕೆಜಿಗೆ 80 ರೂ.ಗೆ ಏರಿಕೆಯಾಗಿದೆ. ಒಂದು ತೆಂಗಿನ ಕಾಯಿ ದರ 60, 70, 80ರೂ.ವರೆಗೆ ಏರಿಕೆಯಾಗಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.

ಬಿಸಿಲು, ರೋಗ, ಇಳುವರಿ ಕುಸಿತ ಮೊದಲಾದ ಕಾರಣಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ದರ ಗರಿಷ್ಠ 80 ರೂಪಾಯಿವರೆಗೆ ಏರಿಕೆಯಾಗಿದ್ದು, ಕೊಬ್ಬರಿ, ಕೊಬ್ಬರಿ ಎಣ್ಣೆ ದರ ಕೂಡ ಏರಿಕೆಯಾಗತೊಡಗಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 35 ರೂಪಾಯಿ ಇದ್ದ ತೆಂಗಿನಕಾಯಿ ದರ ಎರಡು ಪಟ್ಟು ಹೆಚ್ಚಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕ್ವಿಂಟಲ್ ಗೆ 13,000 ರೂ. ಇದ್ದ ಕೊಬ್ಬರಿ ದರ ಮಾರ್ಚ್ 25ರಂದು ಗರಿಷ್ಠ 19,051 ರೂಪಾಯಿಗೆ ಮಾರಾಟವಾಗಿದೆ. ಸದ್ಯ 18 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ಎಳನೀರು ದರ ಒಂದಕ್ಕೆ 60, 70 ರೂಪಾಯಿ, ತೆಂಗಿನ ಕಾಯಿ ಒಂದು ಕೆಜಿಗೆ 80 ರೂ.ವರೆಗೆ ಇದ್ದು, ತೆಂಗಿನ ಎಣ್ಣೆ ಲೀಟರಿಗೆ 300 ರಿಂದ 320ರೂ.ದರ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular