ಚಿಕ್ಕಬಳ್ಳಾಪುರ: ತಾಯಿಯ ಆರೈಕೆಯನ್ನು ನಿರ್ಲಕ್ಷಿಸಿದ ಪುತ್ರನಿಗೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಶಾಕ್ ನೀಡಿದೆ.
ತಾಯಿಯ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು ಆರ್ಥಿಕ ನೆರವು ನೀಡುವ ಜೊತೆಗೆ ಸ್ವಾಧೀನಾನುಭವದಲ್ಲಿರುವ ಮನೆಯನ್ನು ಬಿಟ್ಟು ಕೊಡುವಂತೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶಿಸಿದೆ.
ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ ವೆಂಕಟಲಕ್ಷ್ಮಮ್ಮ(68) ಅವರ ಆರೈಕೆಗೆ ಪುತ್ರ ಅಶೋಕ್ ಅಸಡ್ಡೆ ತೋರಿಸಿದ್ದರು. ಈ ಬಗ್ಗೆ ವೃದ್ಧೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಪ್ರತಿ ತಿಂಗಳು ತಾಯಿಗೆ ಆರ್ಥಿಕ ನೆರವು ನೀಡುವ ಜತೆಗೆ ಮನೆ ಬಿಟ್ಟು ಕೊಡುವಂತೆ ಆದೇಶಿಸಿದ್ದಾರೆ.

