HomeLatest NewsBIG NEWS : ಮಾಂಸಹಾರಿಗಳಿಗೆ ಬಿಗ್ ಶಾಕ್ : ಮೊಟ್ಟೆ ಬೆನ್ನಲ್ಲೇ 'ಚಿಕನ್' ದರ ಭಾರಿ...

BIG NEWS : ಮಾಂಸಹಾರಿಗಳಿಗೆ ಬಿಗ್ ಶಾಕ್ : ಮೊಟ್ಟೆ ಬೆನ್ನಲ್ಲೇ ‘ಚಿಕನ್’ ದರ ಭಾರಿ ಏರಿಕೆ |Chicken Price Hike


ಬೆಂಗಳೂರು : ಮಾಂಸಹಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಮೊಟ್ಟೆ ಬಳಿಕ ಚಿಕನ್ ದರ ಕೂಡ ಹೆಚ್ಚಾಗಿದೆ. ಕೋಳಿಮಾಂಸದ ಬೆಲೆ ಕೆಜಿಗೆ 270 ರೂ.ಗೆ ಏರಿಕೆಯಾಗಿದೆ.

ಹೌದು, ಈಗಾಗಲೇ ಮೊಟ್ಟೆ ಬೆಲೆ 6 ರೂನಿಂದ 8 ರೂಗೆ ಏರಿಕೆಯಾಗಿತ್ತು. ಈಗ ಕೋಳಿ ಮೊಟ್ಟೆ ಜೊತೆಗೆ ಮಾಂಸದ ಬೆಲೆ ಕೂಡ ಏರಿಕೆಯಾಗಿದೆ. ರಾಜ್ಯದ ಹಲವು ಕಡೆ ಕೋಳಿ ಮಾಂಸ ಕೆಜಿಗೆ 270 ರೂಗೆ ಮಾರಾಟವಾಗುತ್ತಿದೆ.
ಚಳಿಗೆ ಮಾಂಸ ಸೇವನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಅಲ್ಲದೇ ಕ್ರಿಸ್ ಮಸ್ ಹಬ್ಬ ಕೂಡ ಹತ್ತಿರ ಬರುತ್ತಿದೆ. ಈ ಹೊತ್ತಲ್ಲೇ ಮೊಟ್ಟೆ ಹಾಗೂ ಚಿಕನ್ ಬೆಲೆ ಸದ್ದಿಲ್ಲದೇ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿಕನ್ ದರ ಇನ್ನೂ ಏರಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರ ಹೆಚ್ಚಳವಾಗಿದೆ. ಕೆಲವು ದಿನಗಳ ಹಿಂದೆ ಒಂದು ಮಟ್ಟಿಗೆ 6 ರೂಪಾಯಿ ಇದ್ದ ದರ ಈಗ 8 ರೂಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದರಿಂದ ಮಾರಾಟ ಹೆಚ್ಚಾಗುವ ಜೊತೆಗೆ ದರ ಕೂಡ ಹೆಚ್ಚಳವಾಗುತ್ತದೆ. ಪ್ರಸ್ತುತ ಒಂದು ಮೊಟ್ಟೆ ದರ 6.90 ರೂ.ನಿಂದ 7.50 ರೂ. ಇದ್ದು, ಕೆಲವೆಡೆ 8 ರೂಪಾಯಿವರೆಗೂ ಮಾರಾಟವಾಗುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ವರ್ಷ, ಕ್ರಿಸ್ಮಸ್ ಸಂದರ್ಭದಲ್ಲಿ ಕೇಕ್ ತಯಾರಿಸಲು ಮೊಟ್ಟೆ ಬಳಕೆ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆ ಆಗದ ಕಾರಣ ದರ ಹೆಚ್ಚಳವಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಮೊಟ್ಟೆಯನ್ನು ಗೋವಾ, ಮಹಾರಾಷ್ಟ್ರ, ಕೇರಳಕ್ಕೂ ಪೂರೈಕೆ ಮಾಡಲಾಗುತ್ತದೆ. ಮೊಟ್ಟೆ ಆಧರಿಸಿದ ಉತ್ಪನ್ನಗಳ ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಬಳಕೆಯಾಗುತ್ತದೆ. ಇನ್ನು ತಮಿಳುನಾಡಿನಿಂದ ರಾಜ್ಯಕ್ಕೆ ಪೂರೈಕೆ ಆಗುತ್ತಿರುವ ಮೊಟ್ಟೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮೊಟ್ಟೆಯ ದರ ಹೆಚ್ಚಳವಾಗಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular