HomeKarnatakaBIG NEWS : 'ನಾನ್ ವೆಜ್' ಪ್ರಿಯರಿಗೆ ಬಿಗ್ ಶಾಕ್ ; ಬೆಂಗಳೂರಲ್ಲಿ ಚಿಕನ್,  ಮೊಟ್ಟೆ...

BIG NEWS : ‘ನಾನ್ ವೆಜ್’ ಪ್ರಿಯರಿಗೆ ಬಿಗ್ ಶಾಕ್ ; ಬೆಂಗಳೂರಲ್ಲಿ ಚಿಕನ್,  ಮೊಟ್ಟೆ ದರದಲ್ಲಿ ಭಾರಿ ಏರಿಕೆ |Chicken, egg Price hike

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಿಕನ್ ಹಾಗೂ ಮೊಟ್ಟೆ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಮಳೆ, ಪೂರೈಕೆಯ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಚಿಕನ್ ದರ ಕೆಜಿಗೆ ₹360 ತಲುಪಿದ್ದು, ಒಂದು ಮೊಟ್ಟೆಯ ಬೆಲೆ ₹9ಕ್ಕೆ ಏರಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಹಾಗೂ ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು. ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಚಿಕನ್ ದರ ಕೆಜಿಗೆ ₹360 ತಲುಪಿದ್ದರೆ, ಒಂದು ಮೊಟ್ಟೆಯ ಬೆಲೆ ₹9ಕ್ಕೆ ಏರಿಕೆಯಾಗಿದೆ. ಮಳೆ, ಕೋಳಿಗಳ ಪೂರೈಕೆಯ ಕೊರತೆ ಹಾಗೂ ಹೆಚ್ಚಿದ ಬೇಡಿಕೆಯ ಪರಿಣಾಮ ಬೆಲೆಗಳು ದಾಖಲೆ ಮಟ್ಟಕ್ಕೇರಿದ್ದು, ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳಿಗೆ ಹೆಚ್ಚುವರಿ ಹೊರೆ ತಂದಿದೆ.

ಕಳೆದ ಕೆಲವು ವಾರಗಳಿಂದ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಕೋಳಿ ಸಾಕಾಣಿಕೆ ಮೇಲೆ ಪರಿಣಾಮ ಬಿದ್ದಿದ್ದು, ಮಾರುಕಟ್ಟೆಗೆ ಕೋಳಿಗಳ ಪೂರೈಕೆ ಕಡಿಮೆಯಾಗಿದೆ. ಇದೇ ವೇಳೆ ಬೇಡಿಕೆ ಹೆಚ್ಚಿರುವುದರಿಂದ ಚಿಕನ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಇದರ ಜೊತೆಗೆ ಮೊಟ್ಟೆಯ ಬೆಲೆಯೂ ಏರಿಕೆಯಾಗಿದ್ದು, ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದು ಮೊಟ್ಟೆಗೆ ₹9 ವರೆಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಮನೆ ಬಳಕೆದಾರರ ಜೊತೆಗೆ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ವ್ಯಾಪಾರಿಗಳ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ. ವ್ಯಾಪಾರಿಗಳ ಪ್ರಕಾರ, ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಚಿಕನ್ ಹಾಗೂ ಮೊಟ್ಟೆ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಾಣುವ ಸಾಧ್ಯತೆ ಕಡಿಮೆ. ಹೀಗಾಗಿ ಸದ್ಯಕ್ಕೆ ಗ್ರಾಹಕರು ದುಬಾರಿ ದರದಲ್ಲೇ ಚಿಕನ್ ಮತ್ತು ಮೊಟ್ಟೆ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular