HomeKarnatakaBIG NEWS : ಮಾಂಸ ಪ್ರಿಯರಿಗೆ ಬಿಗ್ ಶಾಕ್ : ಚಿಕನ್, ಮಟನ್ ಬೆಲೆಯಲ್ಲಿ ಭಾರಿ...

BIG NEWS : ಮಾಂಸ ಪ್ರಿಯರಿಗೆ ಬಿಗ್ ಶಾಕ್ : ಚಿಕನ್, ಮಟನ್ ಬೆಲೆಯಲ್ಲಿ ಭಾರಿ ಏರಿಕೆ.!

ಬೇಸಿಗೆಯ ಧಗಧಗಿಸುವ ಬಿಸಿಲು ಮತ್ತು ರಂಜಾನ್ ಸಂಭ್ರಮದ ನಡುವೆಯೇ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಾದ್ಯಂತ ಚಿಕನ್ ಮತ್ತು ಮಟನ್ ದರಗಳು ಭಾರೀ ಏರಿಕೆ ಕಂಡಿವೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾಂಸದ ಬೇಡಿಕೆ ಹೆಚ್ಚಾಗಿದ್ದರೂ, ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕೋಳಿಗಳ ಉತ್ಪಾದನೆಯಲ್ಲಿ ಗಣನೀಯ ಕುಸಿತ ಕಂಡಿರುವುದು ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಬೇಸಿಗೆಯ ಬಿಸಿ ಮತ್ತು ರಂಜಾನ್ ಮಾಸದ ಹಿನ್ನೆಲೆಯಲ್ಲಿ ಬೆಂಗಳೂರು , ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹಲವು ಕಡೆ  ಚಿಕನ್ ಹಾಗೂ ಮಟನ್ ದರಗಳು ಭಾರೀ ಏರಿಕೆ ಕಂಡಿವೆ.  ಉತ್ಪಾದನೆ ಕುಸಿತ ಮತ್ತು ಬೇಡಿಕೆ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

ಚಿಕನ್ ದರ ಕೆಜಿಗೆ ₹400 ರತ್ತ!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವು ದಿನಗಳ ಹಿಂದೆಯಷ್ಟೇ ಕೆಜಿ ಸ್ಕಿನ್‌ಲೆಸ್ ಚಿಕನ್ ಬೆಲೆ ₹330 ಆಸುಪಾಸಿನಲ್ಲಿತ್ತು. ಆದರೆ ಈಗ ಅದು ₹400 ಗಡಿಯಲ್ಲಿದೆ.ಸ್ಕಿನ್‌ಲೆಸ್ ಚಿಕನ್ ಕೆಜಿಗೆ ₹350 ಹಾಗೂ ಲೈವ್ ಬರ್ಡ್ ₹207 ರಷ್ಟಿದೆ. ಹಲವು ಕಡೆ   ಚಿಕನ್ ದರ ಗರಿಷ್ಠ ಮಟ್ಟದಲ್ಲಿದ್ದು, ಕೆಜಿಗೆ ₹400 ವರೆಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಚಿಕನ್ ದರ ಕೆಜಿಗೆ ₹300 ದಾಟಿದ್ದರೆ, ನೆರೆರಾಜ್ಯಗಳಲ್ಲಿ ₹400ರ ಗಡಿ ತಲುಪುತ್ತಿದೆ.

ಮಟನ್ ಬೆಲೆಯಲ್ಲೂ ಏರಿಕೆ

ಚಿಕನ್ ಮಾತ್ರವಲ್ಲದೆ ಮಟನ್ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಮಟನ್ ಬೆಲೆ ಕೂಡ ಕೆಜಿಗೆ ₹800 ರಿಂದ ₹1000ದ ಆಸುಪಾಸಿನಲ್ಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಬೆಲೆ ಏರಿಕೆಗೆ ಕಾರಣಗಳೇನು ?

ಬಿಸಿಲ ಬೇಗೆ : ತೀವ್ರ ಎಂಡೆ ಇರುವುದರಿಂದ ಕೋಳಿಗಳು ಮೃತಪಡುತ್ತಿವೆ. ಇದರಿಂದಾಗಿ ಕೋಳಿ ಸಾಕಾಣಿಕೆದಾರರು ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಿದ್ದಾರೆ (ಹಿಂದೆ 1 ಲಕ್ಷ ಕೋಳಿ ಸಾಕುತ್ತಿದ್ದವರು ಈಗ 50 ಸಾವಿರಕ್ಕೆ ಇಳಿಸಿದ್ದಾರೆ).

ರಂಜಾನ್ ಬೇಡಿಕೆ : ರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.

ಸಾಕಾಣಿಕೆ ವೆಚ್ಚ : ಕೋಳಿ ಮರಿಗಳ ಬೆಲೆ ₹45 ರಿಂದ ₹61ಕ್ಕೆ ಏರಿಕೆಯಾಗಿದೆ. ಜೊತೆಗೆ ಕೋಳಿ ಆಹಾರ ಮತ್ತು ಸಾಗಾಣಿಕೆ ವೆಚ್ಚವೂ ಹೆಚ್ಚಾಗಿದೆ.ಬಿಸಿಲಿನ ಕಾರಣದಿಂದ ಹೊಸದಾಗಿ ಕೋಳಿ ಸಾಕಲು ರೈತರು ಮುಂದೆ ಬರುತ್ತಿಲ್ಲ, ಇದರಿಂದ ಮಾರುಕಟ್ಟೆಗೆ ಕೋಳಿಗಳ ಪೂರೈಕೆ ಕಡಿಮೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular