HomeKarnatakaBIG NEWS : ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ : ಪ್ರತಿ ಕ್ವಿಂಟಾಲ್ ಗೆ 2...

BIG NEWS : ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ : ಪ್ರತಿ ಕ್ವಿಂಟಾಲ್ ಗೆ 2 ಸಾವಿರ ರೂ. ಕುಸಿತ

ಬೆಂಗಳೂರು : ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಪ್ರತಿ ಕ್ವಿಂಟಾಲ್ ಗೆ 2 ಸಾವಿರ ರೂ. ಕುಸಿತವಾಗಿದೆ.

ಭೂತಾನ್ನಿಂದ 17 ಸಾವಿರ ಟನ್ ಅಡಕೆ ಆಮದು ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಎರಡು ಸಾವಿರ ರೂ.ಗೆ ಕುಸಿತವಾಗಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಮತ್ತೆ ಆತಂಕ ಶುರುವಾಗಿದೆ. ಅದರಲ್ಲೂ ಹೆಚ್ಚಾಗಿ ಅಡಕೆ ಬೆಳೆಯುವ ಚನ್ನಗಿರಿ ತಾಲೂಕಿನ ಅಡಕೆ ಬೆಳೆಗಾರರಿಗೆ ಆತಂಕ ಶುರುವಾಗಿದ್ದು, ಅಡಿಕೆ ದರ ಕಡಿಮೆಯಾಗುವ ಹಿನ್ನೆಲೆ ಬೇಗನೇ ಕೊಯ್ಲು ಶುರು ಮಾಡಿದ್ದಾರೆ.

ರಾಜ್ಯದ ಮಾರುಕಟ್ಟೆಯಲ್ಲಿಅಡಿಕೆ ಧಾರಣೆ ಮತ್ತೆ ಭಾರೀ ಕುಸಿತ ಕಂಡಿದೆ. ಇತ್ತೀಚೆಗಷ್ಟೇ 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಕುಸಿತ ಕಂಡಿದೆ. ಸದ್ಯ, ರಾಶಿ ಅಡಿಕೆ ಗರಿಷ್ಟ 53,900 ರೂ. . ಇದೆ. ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿದ್ದು, ಒಂದೊಂದು ಕಡೆ ಒಂದೊಂದು ಬೆಲೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular