HomeLatest Newsಗ್ರಾಹಕರಿಗೆ ಬಿಗ್ ಶಾಕ್: ಶತಕದ ಸನಿಹಕ್ಕೆ ಟೊಮೆಟೊ ದರ: ಕೆಜಿಗೆ 90 ರೂ.ಗೆ ಏರಿಕೆ

ಗ್ರಾಹಕರಿಗೆ ಬಿಗ್ ಶಾಕ್: ಶತಕದ ಸನಿಹಕ್ಕೆ ಟೊಮೆಟೊ ದರ: ಕೆಜಿಗೆ 90 ರೂ.ಗೆ ಏರಿಕೆ

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಟೊಮೆಟೊ ದರ ಶತಕದ ಸಮೀಪಕ್ಕೆ ಬಂದಿದೆ. ಟೊಮೆಟೊ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ ಹಾಪ್ ಕಾಮ್ಸ್ ಗಳಲ್ಲಿ ಉತ್ತಮ ದರ್ಜೆಯ ಟೊಮೆಟೊ ಕೆಜಿಗೆ 80 ರೂ.ವರೆಗೆ ಮಾರಾಟವಾಗಿದೆ. ತಳ್ಳುವ ಗಾಡಿಗಳಲ್ಲಿ ಚಿಲ್ಲರೆ ಮಾರಾಟ ದರ 90 ರೂ.ವರೆಗೆ ಏರಿಕೆಯಾಗಿದೆ. ಮಾರುಕಟ್ಟೆಗೆ ಬರುವ ಟೊಮೆಟೊ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಬೆಲೆ ಏರಿಕೆಯಾಗಿದೆ.

ಪ್ರತಿದಿನ ಮಾರುಕಟ್ಟೆಗೆ 800ರಿಂದ 1 ಸಾವಿರ ಬಾಕ್ಸ್ ಟೊಮೆಟೊ ಮಾರಾಟಕ್ಕೆ ಬರುತ್ತದೆ. ಉತ್ತಮ ಟೊಮೆಟೊ ಸಾಹು ಹೈಬ್ರಿಡ್ ಟೊಮೆಟೊ ಬಾಕ್ಸ್ ಗೆ 800 ರಿಂದ 1000 ರೂ.ವರೆಗೂ ಮಾರಾಟವಾಗಿದೆ. ಚಿಕ್ಕಬಳ್ಳಾಪುರ ಚಿಂತಾಮಣಿ ಎಪಿಎಂಸಿಯಲ್ಲಿ ಟೊಮೆಟೊ ದರ ಬಾಕ್ಸ್ ಗೆ 600 ರಿಂದ 800ರೂ. ವರೆಗೆ ಮಾರಾಟವಾಗಿದೆ. ಗೋಲಿ ಗಾತ್ರದ ಟೊಮೆಟೊ ಕೆಜಿ ಬಾಕ್ಸ್ ಗೆ 350 ರಿಂದ 400 ರುಪಾಯಿಗೆ ಮಾರಾಟವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ 14 ಕೆಜಿ ಬಾಕ್ಸ್ ಗೆ 500 ರಿಂದ 750 ರೂ.ವರೆಗೆ ಹರಾಜಾಗಿದೆ. ಕಳೆದ ಒಂದು ತಿಂಗಳ ಹಿಂದೆ ಕೆಜಿಗೆ 15 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ 50 ರೂಪಾಯಿ ದಾಟಿದ್ದು, ಇದೀಗ 90 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಬೆಳೆಗಾರರಿಗೆ ಸಂತಸ ಮೂಡಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular