ಬೆಂಗಳೂರು: ವಂಚನೆ ಆರೋಪ ಹೊತ್ತಿದ್ದ ಐಶ್ವರ್ಯಾ ಗೌಡಗೆ ರಿಲಿಫ್ ಸಿಕ್ಕಿದೆ. ಐದು ಪ್ರಕರಣಗಳನ್ನು ರದ್ದುಪಡಿಸಿ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ದೂರುಗಳೆಲ್ಲವೂ ಹಣ ರಿಕವರಿ ಸ್ವರೂಪದ್ದಾಗಿದೆ. ಅಪರಾಧದ ಅಂಶಗಳಿಲ್ಲವೆಂದು ವಕೀಲ ಎಸ್. ಸುನಿಲ್ ಕುಮಾರ್ ವಾದ ಮಂಡಿಸಿದ್ದಾರೆ. ಸಿವಿಲ್ ಸ್ವರೂಪದ ಪ್ರಕರಣಗಳೆಂದು ಹೈಕೋರ್ಟ್ ಕೇಸ್ ಗಳನ್ನು ರದ್ದುಪಡಿಸಿದೆ. ನಟ ಧರ್ಮೇಂದ್ರ(ಧರ್ಮ) ವಿರುದ್ಧದ ಕೇಸ್ ಕೂಡ ರದ್ದು ಮಾಡಲಾಗಿದೆ.

