HomeKarnatakaBIG NEWS: ಸೈಬರ್ ಕ್ರೈಂ ತಡೆಗೆ ತಾಂತ್ರಿಕತೆ, ಕಠಿಣ ಕಾನೂನು: ಪರಮೇಶ್ವರ್

BIG NEWS: ಸೈಬರ್ ಕ್ರೈಂ ತಡೆಗೆ ತಾಂತ್ರಿಕತೆ, ಕಠಿಣ ಕಾನೂನು: ಪರಮೇಶ್ವರ್

ಬೆಂಗಳೂರು: ಸೈಬರ್ ಕ್ರೈಂ ತಡೆಗೆ ಯೋಜನೆ ರೂಪಿಸಿದ್ದು, ತಾಂತ್ರಿಕತೆ ಕಠಿಣ ಕಾನೂನು ರೂಪಿಸಿ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ರಾಜ್ಯ ಅಪರಾಧ ತನಿಖಾ ಇಲಾಖೆ(ಸಿಐಡಿ), ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ಮೂರನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆ ಉದ್ಘಾಟಿಸಿ ಅವರು ಮಾತನಾಡಿ, ಮಾದಕ ವಸ್ತು ಮಾರಾಟ ಜಾಲ, ದತ್ತಾಂಶ ಕಳವು, ಹಣಕಾಸು ವಂಚನೆ ಸೈಬರ್ ಕೃತ್ಯಗಳನ್ನು ತಾಂತ್ರಿಕತೆಯ ಜೊತೆಗೆ ಕಠಿಣ ಕಾನೂನು ರೂಪಿಸಿ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.

ಸೈಬರ್ ಅಪರಾಧ ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಮಿತಿ ಇಲ್ಲದ ತಂತ್ರಜ್ಞಾನ ಆಧಾರಿತ ನಿರಂತರವಾಗಿ ವಿಕಸನಗೊಕೊಳ್ಳುತ್ತಿರುವ ಅಪರಾಧ ಜಗತ್ತು ಆಗಿದೆ. ಹಣಕಾಸು ವಂಚನೆಗಳು ಡಾರ್ಕ್ ವೆಬ್ ಆಧರಿತ ಮಾದಕ ವಸ್ತು ಜಾಲಗಳು, ಡೇಟಾ ಉಲ್ಲಂಘನೆವರೆಗೆ ಬೆದರಿಕೆ ಪ್ರಮಾಣ ಹೆಚ್ಚಾಗುತ್ತದೆ. ತಾಂತ್ರಿಕ ಸಾಮರ್ಥ್ಯದಿಂದ ಮಾತ್ರವಲ್ಲದೆ ಕಾನೂನುಗಳನ್ನು ಬಲಪಡಿಸುವ ಮೂಲಕ ಇವುಗಳನ್ನು ಸಂಘಟನಾತ್ಮಕವಾಗಿ ಎದುರಿಸಬೇಕಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೈಬರ್ ದಾಳಿಗಳ ತನಿಖೆ, ಡಿಜಿಟಲ್ ಪುರಾವೆ ಸಂಗ್ರಹಿಸಲು ಅಗತ್ಯ ಕೌಶಲ್ಯ ತರಬೇತಿ ಮತ್ತು ತಂತ್ರಜ್ಞಾನ ಸಾಲದು. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆ, ನಗರಗಳಲ್ಲಿ 43 ಸೈಬರ್ ಕ್ರೈಂ ಠಾಣೆಗಳನ್ನು ಸ್ಥಾಪಿಸಲಾಗಿದೆ. ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತಾ ಅನುಸರಣೆ ಅಪಾಯ ನಿರ್ವಹಣೆಯಂತಹ ವಿವಿಧ ವಲಯಗಳಲ್ಲಿ ಪರಿಣಿತಿ ಹೊಂದಿರುವ ವೈವಿಧ್ಯಮಯ ಕಂಪೆನಿಗಳೊಂದಿಗೆ ಸೈಬರ್ ಭದ್ರತಾ ನವೋದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ಸೈಬರ್ ಕಮಾಂಡ್ ಹಾಗೂ ಡಿಐಜಿ ಪ್ರಣವ್ ಮೊಹಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ ಗೋಡ್ಸೆ ಇತರರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular