HomeKarnatakaBIG NEWS: ಜೂನ್ 1 ರಿಂದ ಪಿಯು ಕಾಲೇಜುಗಳು ಆರಂಭ

BIG NEWS: ಜೂನ್ 1 ರಿಂದ ಪಿಯು ಕಾಲೇಜುಗಳು ಆರಂಭ

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಜೂನ್ 1 ರಿಂದ ಆರಂಭವಾಗಲಿದ್ದು, ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಮೇ 13 ರಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 2ರಿಂದ ಅಕ್ಟೋಬರ್ 18 ರವರೆಗೆ ದಸರಾ ರಜೆ ಇರಲಿದ್ದು, ಅಕ್ಟೋಬರ್ 19 ರಿಂದ 2025 ರ ಮಾರ್ಚ್ 31 ರ ವರೆಗೆ ಎರಡನೇ ಅವಧಿಯ ತರಗತಿಗಳು ಆರಂಭವಾಗಲಿವೆ. 2025ರ ಏಪ್ರಿಲ್ 1 ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.

ವಿದ್ಯಾರ್ಥಿಗಳು ದಂಡ ಶುಲ್ಕವಿಲ್ಲದೆ ಜೂನ್ 14ರ ಒಳಗೆ ಪ್ರವೇಶ ಪಡೆಯಬಹುದಾಗಿದ್ದು, ಜೂನ್ 29 ರ ಒಳಗೆ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರವೇಶ ಶುಲ್ಕಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಇದ್ದಂತೆ ಮುಂದುವರೆಯಲಿದ್ದು, ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಅಲ್ಲದೆ ಎಲ್ಲ ಕಾಲೇಜುಗಳು ಮಾರ್ಗಸೂಚಿಯಂತೆ ಮೀಸಲಾತಿ ಅನ್ವಯ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ತಿಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular