HomeKarnatakaBIG NEWS: IPS ಅಧಿಕಾರಿ ಎಂದು ಹೇಳಿ 2.5 ಕೋಟಿ ರೂ. ವಂಚಿಸಿದ ಭೂಪ

BIG NEWS: IPS ಅಧಿಕಾರಿ ಎಂದು ಹೇಳಿ 2.5 ಕೋಟಿ ರೂ. ವಂಚಿಸಿದ ಭೂಪ

ಬೆಂಗಳೂರು: ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಆರೋಪಿಯೊಬ್ಬ ವ್ಯಕ್ತಿಯೋರ್ವರಿಗೆ 2.5 ಕೋಟಿ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀನಿವಾಸ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಐಪಿಎಸ್ ಅಧಿಕಾರಿ ಎಂದು ಹೇಳುತ್ತಿದ್ದ ಶ್ರೀನಿವಾಸ್, ತಾನು ಪ್ರೊಬೇಷನರಿ ಎಸ್ ಪಿ ಎಂದು ಹೇಳಿಕೊಂಡು ಕೆಲ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದ್ದಂತೆ. ಪ್ರಸ್ತುತ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸುತ್ತಿದ್ದಂತೆ.

ಮೈಸೂರಿನಲ್ಲಿ 450 ಕೋಟಿ ಲ್ಯಾಂಡ್ ವ್ಯವಹಾರವಿದೆ. ಅದು ಡೀಲ್ ಆದರೆ 250 ಕೋಟಿ ಸಿಗುತ್ತೆ. ಸಧ್ಯ ಒಂದಿಷ್ಟು ಹಣ ಬೇಕು ಎಂದು ಕೇಳಿ ವ್ಯಕ್ತಿಯೋರ್ವರಿಂದ ಪಡೆದಿದ್ದ. ಬಳಿಕ ಹಂತ ಹಂತವಾಗಿ 2.5 ಕೋಟಿ ಹಣ ಪಡೆದು ವಂಚಿಸಿದ್ದ. ಈ ಹಿನ್ನೆಲೆಯಲ್ಲಿ ನಕಲಿ ಐಪಿಎಸ್ ಅಧಿಕಾರಿಯಿಂದ ಮೋಸ ಹೋದವರು ತಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular