HomeLatest NewsBIG NEWS: ಸ್ವಾದಭರಿತ ಹಾಲಿಗೆ ಶೇ. 15ರ ಬದಲು ಶೇ. 5ರಷ್ಟು GST ವಿಧಿಸಲು ಹೈಕೋರ್ಟ್...

BIG NEWS: ಸ್ವಾದಭರಿತ ಹಾಲಿಗೆ ಶೇ. 15ರ ಬದಲು ಶೇ. 5ರಷ್ಟು GST ವಿಧಿಸಲು ಹೈಕೋರ್ಟ್ ಆದೇಶ

ಬೆಂಗಳೂರು: ಸ್ವಾದಭರಿತ ಹಾಲು ಡೈರಿ ಉತ್ಪನ್ನ ಪಾನೀಯವಲ್ಲದ ಕಾರಣ ಅದಕ್ಕೆ ಶೇಕಡ 12ರಷ್ಟು ಜಿ.ಎಸ್‌.ಟಿ. ಬದಲು ಶೇ. 5ರಷ್ಟು ಮಾತ್ರ ತೆರಿಗೆ ವಿಧಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಸ್ವಾದಭರಿತ ಹಾಲನ್ನು ಡೈರಿ ಉತ್ಪನ್ನ ಒಂದು ಪರಿಗಣಿಸಬೇಕೆ ಹೊರತು ಪಾನೀಯ ಎಂದು ವರ್ಗೀಕರಿಸುವಂತಿಲ್ಲ. ಹೀಗಾಗಿ ಸ್ವಾಗತ ಹಾಲಿಗೆ ಶೇಕಡ 12ರಷ್ಟು ಜಿ.ಎಸ್.ಟಿ. ವಿಧಿಸುವ ಬದಲು ಶೇಕಡ 5ರಷ್ಟು ಮಾತ್ರ ಜಿ.ಎಸ್.ಟಿ. ವಿಧಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ದೊಡ್ಲಾ ಡೈರಿ ಲಿಮಿಟೆಡ್ ಕಂಪನಿ ಈ ಬಗ್ಗೆ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿಯ ಎಸ್.ಆರ್. ಕೃಷ್ಣ ಕುಮಾರ್, ದೊಡ್ಲಾ ಕಂಪನಿ ಪಾವತಿಸಿರುವ ತೆರಿಗೆ ಹಣವನ್ನು ಮರುಪಾವತಿಸುವಂತೆ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಲು ಸೇರಿದಂತೆ ದೊಡ್ಲಾ ಕಂಪನಿಯ ಇತರ ಉತ್ಪನ್ನಗಳಿಗೆ ಡೈರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇಕಡ 5ರ ಜಿ.ಎಸ್‌.ಟಿ. ಬದಲು ಶೇಕಡ 12 ಮತ್ತು ಶೇಕಡ 18ಕ್ಕೂ ಹೆಚ್ಚು ಜಿ.ಎಸ್.ಟಿ. ವಿಧಿಸಲಾಗಿತ್ತು. ಸುವಾಸನೆ ಭರಿತ ಹಾಲು ತನ್ನ ಮೂಲ ಸ್ವರೂಪದಲ್ಲಿ ಉಳಿದುಕೊಳ್ಳುತ್ತದೆ. ಸುವಾಸನೆಭರಿತ ಹಾಲು ತನ್ನ ಮೂಲ ಸ್ವರೂಪದಲ್ಲಿಯೂ ಹಾಲು ಆಗಿಯೇ ಉಳಿಯುತ್ತದೆ. ಸುಂಕ ಶೀರ್ಷಿಕೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತೆರಿಗೆದಾರರು ಠೇವಣಿ ಮಾಡಿದ ಮೊತ್ತವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಮರುಪಾವತಿಸಬೇಕು ಎಂದು ತೆರಿಗೆ ಇಲಾಖೆಗೆ ಆದೇಶಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular