HomeLatest NewsBIG NEWS: GST ಶೇ. 12ರ ಸ್ಲ್ಯಾಬ್ ತೆಗೆದು ಹಾಕಲು ನಿರ್ಧಾರ

BIG NEWS: GST ಶೇ. 12ರ ಸ್ಲ್ಯಾಬ್ ತೆಗೆದು ಹಾಕಲು ನಿರ್ಧಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ವಿವಿಧ ಶ್ರೇಣಿಗಳಲ್ಲಿ ಶೇಕಡ 12ರ ಸ್ಲ್ಯಾಬ್ ತೆಗೆದು ಹಾಕಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಈಗಿನ ತೆರಿಗೆ ವ್ಯವಸ್ಥೆಯಲ್ಲಿ ಶೇಕಡ 5, ಶೇಕಡ 12, ಶೇಕಡ 18 ಮತ್ತು ಶೇಕಡ 28 ರಷ್ಟು ಸೇರಿ 5 ಸ್ಲ್ಯಾಬ್ ಗಳಿವೆ. ಶೇಕಡ 12ರಷ್ಟು ಸ್ಲ್ಯಾಬ್ ತೆಗೆದುಹಾಕಲು ಅನೇಕ ರಾಜ್ಯಗಳು ಬೆಂಬಲ ನೀಡಿವೆ. ಇದು ರದ್ದಾದಲ್ಲಿ ಶೇಕಡ 12ರ ತೆರಿಗೆ ವ್ಯಾಪ್ತಿಯಲ್ಲಿದ್ದ ವಸ್ತುಗಳನ್ನು ಶೇಕಡ 5 ಇಲ್ಲವೇ ಶೇಕಡ 18ರ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ.

ಪುಷ್ಟೀಕರಿಸಿದ ಹಾಲು, 20 ಲೀಟರ್ ಕುಡಿಯುವ ನೀರಿನ ಬಾಟಲ್, ವಾಕಿ ಟಾಕಿ, ಕಾಂಟ್ಯಾಕ್ಟ್ ಲೆನ್ಸ್, ಬೆಣ್ಣೆ, ಕರ್ಜೂರ, ಡ್ರೈ ಫ್ರೂಟ್ಸ್, ಜಾಮ್, ಜಲ್ಲಿ, ಹಣ್ಣಿನ ಜ್ಯೂಸ್, ಟೂತ್ ಪೌಡರ್, ಫೀಡಿಂಗ್ ಬಾಟಲ್, ಕಾರ್ಪೆಟ್, ಛತ್ರಿ, ಸೈಕಲ್, ಮರದ ಮೇಜು, ಪೆನ್ಸಿಲ್, ಹ್ಯಾಂಡ್ ಬ್ಯಾಗ್, ಒಂದು ಸಾವಿರ ರೂಪಾಯಿ ಒಳಗಿನ ಪಾದರಕ್ಷೆಗಳು ಇತ್ಯಾದಿ ವಸ್ತುಗಳು ಶೇ. 12ರ ತೆರಿಗೆ ಸ್ಲ್ಯಾಬ್ ವ್ಯಾಪ್ತಿಯಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನ್ ಇಲ್ಲವೇ ಜುಲೈನಲ್ಲಿ ಜಿಎಸ್ಟಿ ಮಂಡಳಿ ಸಭೆ ನಡೆಯಲಿದ್ದು, ಆಗ ಶೇಕಡ 12 ತೆರಿಗೆ ಸ್ಲ್ಯಾಬ್ ಗಳನ್ನು ಮರು ಹೊಂದಾಣಿಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular