HomeLatest NewsBIG NEWS: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಚುರುಕು: 369 ವಾರ್ಡ್ ಗಳ ಮೀಸಲಾತಿ ಪ್ರಕಟ:...

BIG NEWS: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಚುರುಕು: 369 ವಾರ್ಡ್ ಗಳ ಮೀಸಲಾತಿ ಪ್ರಕಟ: ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ಮೀಸಲು

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಐದು ನಗರ ಪಾಲಿಕೆಗಳ 369 ವಾರ್ಡ್ ಗಳ ಕರಡು ಮೀಸಲಾತಿ ಪಟ್ಟಿ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದ್ದು, ಈ ಮೂಲಕ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದೆ.

ಜನವರಿ 23ರೊಳಗೆ ಸಾರ್ವಜನಿಕರು ಮೀಸಲಾತಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಎಲ್ಲಾ ವಿಭಾಗಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಸ್ಥಾನ ಮೀಸಲಾಗಿದೆ. ಮಹಿಳೆಯರು ಸೇರಿದಂತೆ ಅನುಸೂಚಿತ ಜಾತಿ ಎಸ್‌ಸಿಗೆ 43 ವಾರ್ಡ್, ಎಸ್.ಟಿ.ಗೆ 7 ವಾರ್ಡ್, ಹಿಂದುಳಿದ ವರ್ಗ(ಎ)ಕ್ಕೆ 97 ವಾರ್ಡ್, ಹಿಂದುಳಿದ ವರ್ಗ(ಬಿ)ಕ್ಕೆ 24 ವಾರ್ಡ್ ಸಾಮಾನ್ಯರಿಗೆ 198 ವಾರ್ಡ್ ಗಳನ್ನು ಮೀಸಲಾಗಿಡಲಾಗಿದೆ. ಒಟ್ಟಾರೆ ಎಲ್ಲಾ ವಿಭಾಗಗಳಿಂದ ಮಹಿಳೆಯರಿಗೆ 176 ವಾರ್ಡ್ ಗಳನ್ನು ಮೀಸಲಿಡಲಾಗಿದೆ.

ಕೇಂದ್ರ ಪಾಲಿಕೆಯಲ್ಲಿ 63, ಪೂರ್ವ ಪಾಲಿಕೆಯಲ್ಲಿ 50, ಪಶ್ಚಿಮ ಪಾಲಿಕೆಯಲ್ಲಿ 112, ಉತ್ತರ ಪಾಲಿಕೆಯಲ್ಲಿ 72, ದಕ್ಷಿಣ ಪಾಲಿಕೆಯಲ್ಲಿ 72 ಸೇರಿ ಒಟ್ಟು 369 ವಾರ್ಡ್ ಗ ಇವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಅನ್ವಯ ಮೀಸಲಾತಿ ನಿಗದಿಪಡಿಸಲಾಗಿದೆ. ಯಾವುದೇ ಆಕ್ಷೇಪಣೆ, ಸಲಹೆ ಸಲ್ಲಿಸುವವರು ತಮ್ಮ ಪೂರ್ಣ ವಿಳಾಸ ಮತ್ತು ಸಹಿಯೊಂದಿಗೆ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ಬೆಂಗಳೂರು-1 ಇವರಿಗೆ ಜನವರಿ 23ರ ಸಂಜೆ 5:30ರ ಒಳಗೆ ಸಲ್ಲಿಸುವಂತೆ ಜಿಬಿಎ ಸೂಚಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular