ಬೆಂಗಳೂರು: ಎಚ್ಎಂಟಿ ಕಾರ್ಖಾನೆಯನ್ನು ಮುಚ್ಚಿಲ್ಲ. ಸದ್ಯದದಲ್ಲಿಯೇ ಹೊಸ ತಂತ್ರಜ್ಞಾನ ಸೇರ್ಪಡೆ ಮಾಡಿ ಎಚ್ಎಂಟಿ ಕಾರ್ಖಾನೆಗೆ ಮರು ಜೀವ ನೀಡಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಎಚ್ಎಂಟಿ ಬಂಡವಾಳ ಹಿಂತೆಗೆತದ ಬಗ್ಗೆ 2016ರಲ್ಲಿ ತೀರ್ಮಾನವಾಗಿದೆ. ಪೂರ್ಣ ಪ್ರಮಾಣದಲ್ಲಿ ಎಚ್ಎಂಟಿ ಕಾರ್ಖಾನೆ ಮುಚ್ಚಿಲ್ಲ. ಚಿಕ್ಕ ಪ್ರಮಾಣದಲ್ಲಿ ವಾಚ್ ಉತ್ಪಾದನೆ ನಡೆಯುತ್ತಿದೆ. ಕೇರಳ, ಹೈದರಾಬಾದ್ ಸೇರಿದಂತೆ ಕೆಲವು ಕಡೆ ಎಚ್ಎಂಟಿ ಕಾರ್ಖಾನೆ ಮುಚ್ಚಿಲ್ಲ. ಈ ಕಾರ್ಖಾನೆಗೆ ಮರುಜೀವ ನೀಡುವ ಬಗ್ಗೆ ಪ್ರಧಾನಿ ಮೋದಿಯವರ ಭೇಟಿಯಾಗಿ ಮನವಿ ಮಾಡಲಾಗಿದೆ. ಸದ್ಯದಲ್ಲಿಯೇ ಹಲವು ಹೊಸ ತಂತ್ರಜ್ಞಾನಗಳನ್ನು ಸೇರ್ಪಡೆ ಮಾಡಿ ಕಾರ್ಖಾನೆಗೆ ಮರು ಜೀವ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

