HomeCrimeBIG NEWS : ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ, ಕತ್ತು ಹಿಸುಕಿ ಕೊಲೆ ಶಂಕೆ..!

BIG NEWS : ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ, ಕತ್ತು ಹಿಸುಕಿ ಕೊಲೆ ಶಂಕೆ..!

ನವದೆಹಲಿ : ಫೆಬ್ರವರಿ 24 ರಿಂದ ಕಾಣೆಯಾಗಿದ್ದ ಮಹಿಳೆಯ ಶವ ದೆಹಲಿಯ ನರೇಲಾ ಪ್ರದೇಶದ ಪ್ಲೇಸ್ಕೂಲ್ ನಲ್ಲಿ ಬುಧವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 32 ವರ್ಷದ ವರ್ಷಾ ನರೇಲಾದ ಸ್ವತಂತ್ರ ನಗರದ ನಿವಾಸಿ. ಈ ಬಗ್ಗೆ ಆಕೆಯ ತಂದೆ ವಿಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.ವರ್ಶಾ ಬಿಜೆಪಿ ಕಾರ್ಯಕರ್ತೆಯಾಗಿದ್ದರು.

ವಿಜಯ್ ಕುಮಾರ್ ಪ್ರಕಾರ, ವರ್ಶಾ ಫೆಬ್ರವರಿ 23 ರಂದು ತನ್ನ ಸ್ಕೂಟಿಯಲ್ಲಿ ಮನೆಯಿಂದ ಹೊರಟಳು ಮತ್ತು ಕೊನೆಯದಾಗಿ ತನ್ನ ಬ್ಯುಸಿನೆಸ್ ಪಾಟ್ರ್ನರ್ ಸೋಹನ್ ಲಾಲ್ ಅವರೊಂದಿಗೆ ಕಾಣಿಸಿಕೊಂಡಳು. ಸೋಹನ್ ಜೊತೆ ಘೋಂಡಾ ರಸ್ತೆಯಲ್ಲಿ ಟಿನಿ ಡ್ರೀಮ್ ಬೆರ್ರಿ ಪ್ಲೇಸ್ಕೂಲ್ ಆರಂಭಿಸಿದ್ದಳು ಎಂದು ವಿಜಯ್ ಕುಮಾರ್ ಹೇಳಿದ್ದಾರೆ. ಪ್ಲೇಸ್ಕೂಲ್ ಇನ್ನೂ ಕಾರ್ಯಾರಂಭ ಮಾಡಿರಲಿಲ್ಲ. ಮಹಿಳೆಯನ್ನುಕತ್ತು ಹಿಸುಕಿ  ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular