HomeLatest NewsBIG NEWS: ನೋಂದಣಿ ಕಾಯ್ದೆಗೆ ತಿದ್ದುಪಡಿ: ಆನ್ಲೈನ್ ಮೂಲಕವೂ ಆಸ್ತಿ ನೋಂದಣಿ, ಆಧಾರ್ ಕಡ್ಡಾಯ ಬದಲಿಗೆ...

BIG NEWS: ನೋಂದಣಿ ಕಾಯ್ದೆಗೆ ತಿದ್ದುಪಡಿ: ಆನ್ಲೈನ್ ಮೂಲಕವೂ ಆಸ್ತಿ ನೋಂದಣಿ, ಆಧಾರ್ ಕಡ್ಡಾಯ ಬದಲಿಗೆ ಪರ್ಯಾಯ ದಾಖಲೆಗೆ ಅವಕಾಶ

ನವದೆಹಲಿ: 117 ವರ್ಷದ ನೋಂದಣಿ ಕಾಯ್ದೆ -1908ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಭೂ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಕುರಿತ ಕರಡು ವಿಧೇಯಕ ಸಿದ್ಧಪಡಿಸಿದೆ.

ಭೂ ದಾಖಲೆಗಳು ಮತ್ತು ಇತರೆ ಆಸ್ತಿ ವಹಿವಾಟುಗಳ ನೋಂದಣಿಯ ಸಂದರ್ಭದಲ್ಲಿ ಆಧಾರ್ ಆಧಾರಿತ ದೃಢೀಕರಣವನ್ನು ಕಡ್ಡಾಯ ಮಾಡದೆ ಐಚ್ಚಿಕ ಆಯ್ಕೆಯನ್ನಾಗಿ ನೀಡಲು ಸರ್ಕಾರ ಮುಂದಾಗಿದೆ. ಅಲ್ಲದೇ ಆನ್ಲೈನ್ ಮೂಲಕವೂ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಿದ ಬಗ್ಗೆ ಕರಡು ವಿಧೇಯಕದಲ್ಲಿ ಹೇಳಲಾಗಿದೆ. ಆದರೆ ಆಧಾರ್ ಸಂಖ್ಯೆ ಆಧರಿತ ದೃಢೀಕರಣವನ್ನು ಕಡ್ಡಾಯಗೊಳಿಸಿಲ್ಲ. ಬದಲಿಗೆ, ಅದನ್ನು ಐಚ್ಚಿಕ ಆಯ್ಕೆಯನ್ನಾಗಿ ಇರಿಸಲಾಗಿದೆ.

ಆಧಾರ್ ಬದಲಿಗೆ ಪರ್ಯಾಯ ದಾಖಲೆಗಳನ್ನು ದೃಢೀಕರಣಕ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಸಂಖ್ಯೆ ಇಲ್ಲದವರು ಅಥವಾ ಆಧಾರ್ ಮಾಹಿತಿ ನೀಡಲು ಇಚ್ಚಿಸದವರು ಈ ಪರ್ಯಾಯ ಆಯ್ಕೆ ಮಾಡಿಕೊಳ್ಳಬಹುದು. ಹೊಸ ವಿಧೇಯಕ ಕಾನೂನಾಗಿ ಜಾರಿಯಾದಲ್ಲಿ ಆನ್ಲೈನ್ ಮೂಲಕವೇ ದಾಖಲೆ ಸಲ್ಲಿಕೆ, ದಾಖಲೆಗಳ ಈ ದೃಢೀಕರಣ, ಆನ್ಲೈನ್ ಮೂಲಕವೇ ನೋಂದಣಿ ಪ್ರಮಾಣ ಪತ್ರ ವಿತರಣೆಗೆ ಅವಕಾಶ ದೊರೆಯಲಿದೆ. ಈ ವಿಧೇಯಕದ ಬಗ್ಗೆ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ರಮ ತಡೆಯುವ ನಿಟ್ಟಿನಲ್ಲಿ ನೋಂದಣಿಗೆ ಆಧಾರ್ ದೃಢೀಕರಣ ಕಡ್ಡಾಯ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಈ ಕುರಿತಾಗಿ ಇತ್ತೀಚಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular