ಶಿವಮೊಗ್ಗ: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ 4 ಸಾವಿರ ಕೋಟಿ ರೂಪಾಯಿ ಮೊತ್ತದ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಭಾರತೀಯ ಒಕ್ಕೂ ಪ್ರಾಧಿಕಾರ ಬಂಡವಾಳ ಹೂಡಲಿದ್ದು, ಪುನಶ್ಚೇತನದ ಬಳಿಕ ರೈಲ್ವೆ ಹಾಗೂ ರಕ್ಷಣಾ ವಲಯದ ಬೇಡಿಕೆ ಆಧರಿಸಿ ಉತ್ಪಾದನೆ ಆರಂಭಿಸಲಾಗುತ್ತದೆ. ಕಾರ್ಖಾನೆಯ 50 ವರ್ಷಗಳ ಭವಿಷ್ಯ ಗಮನದಲ್ಲಿರಿಸಿಕೊಂಡು ಮಾರುಕಟ್ಟೆ ಹಾಗೂ ಹೊಸ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿ ಪ್ರತ್ಯೇಕ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಂಪುಟದಲ್ಲಿ ವಿಐಎಸ್ಎಲ್ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಈ ತೀರ್ಮಾನ ಹಿಂಪಡೆಯಲು ಪ್ರಧಾನಿ ಮೋದಿ ಅವರ ಮನವೊಲಿಸಿ ಕಾರ್ಖಾನೆಗೆ ಜೀವ ತುಂಬುವ ಪ್ರಯತ್ನ ನಡೆದಿದೆ. ಒಮ್ಮೆ ಕಾರ್ಖಾನೆ ಪುನರಾರಂಭವಾದಲ್ಲಿ ಯಾವುದೇ ತಡೆಯಿಲ್ಲದೆ ಮುಂದುವರಿಯಬೇಕು. ಹೀಗಾಗಿ ಅಗತ್ಯವಿರುವ ಗಣಿ ಪಡೆಯುವ ಕಾರ್ಯ ಕೂಡ ನಡೆದಿದ್ದು, ಜನವರಿಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
