
ಪವಿತ್ರಾ ಅಲಿಯಾಸ್ ಮಮತಾ (22) ಕೊಲೆಯಾದ ಮಹಿಳೆ. ಆರೋಪಿ ನಾಗರಾಜ್ ನನ್ನು ಮಾನ್ವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಜೋಡಿ ಮಾನ್ವಿ ಬಳಿಯ ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ ಪಾಪಿ ಪತಿ.

