HomeKarnatakaBIG NEWS: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ; ಎಸ್.ಡಿ.ಪಿ.ಐ ಜತೆ ಬಿಜೆಪಿಗೆ...

BIG NEWS: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ; ಎಸ್.ಡಿ.ಪಿ.ಐ ಜತೆ ಬಿಜೆಪಿಗೆ ಸಂಬಂಧವಿದೆ ಎಂದು ಆರೋಪ

ಉಡುಪಿ: ಬಿಜೆಪಿಯ ದುರುದ್ದೇಶ ಪೂರಿತ ಹಿಂದುತ್ವಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ಬಿಜೆಪಿಯವರು ಹಿಂದೂ ಪರ ಇಲ್ಲ, ಹಿಂದುತ್ವದ ಪರವಾಗಿರುವವರು ಅವರ ಮಾತಿಗೆ ಮರುಳಾಗಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದೂಗಳ ಪರವಾಗಿರುವವರು ಎಂದರೆ ಮನುಷ್ಯತ್ವದ ಪರ ಇರುವವರು. ಆದರೆ ಬಿಜೆಪಿ ನಾಯಕರು ಹಿಂದುಗಳ ಪರವಿಲ್ಲ, ಕರಾವಳಿ ಭಾಗದಲ್ಲಿ ಕೊಲೆಯಾದವರು ಹಿಂದುಳಿದ ಜಾತಿಯವರು. ಆರ್ ಎಸ್ ಎಸ್, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಾರೆ ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು.

ಇನ್ನು ನಳೀನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷರಾಗಲು ನಾಲಾಯಕ್. ರಸ್ತೆ, ಚರಂಡಿ ವಿಚಾರಗಳನ್ನು ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ. ಕರಾವಳಿಯನ್ನು ಹಿಂದುತ್ವದ ಪ್ರಯೋಗಾಲಯ ಮಾಡಲು ಹೊರಟಿದ್ದಾರೆ. ನಮ್ಮ ವಿರೋಧ ಮನುವಾದಿಗಳಿಗೆ ಹೊರತು ಹಿಂದೂವಾದಿಗಳಿಗೆ ಅಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಎಸ್ ಡಿ ಪಿ ಐ ಜತೆ ಬಿಜೆಪಿಗೆ ಸಂಬಂಧವಿದೆ. ಈ ಸಂಘಟನೆ ಜತೆ ಸಂಬಂಧ, ಸ್ನೇಹ ಹೊಂದಿದ್ದರೆ ಅದು ಬಿಜೆಪಿ ಹೊರತು ಕಾಂಗ್ರೆಸ್ ಅಲ್ಲ. ಪಿ ಎಫ್ ಐ, ಎಸ್ ಡಿ ಪಿ ಐ ರದ್ದು ಮಾಡ್ತೀವಿ ಅಂತಾ ಅಧಿಕಾರಕ್ಕೆ ಬಂದ್ರು. ಬಿಜೆಪಿಯವರು ಬರಿ ಪಿ ಎಫ್ ಐ ಮಾತ್ರ ರದ್ದು ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆರ್ ಎಸ್ ಎಸ್. ಎಸ್ ಡಿ ಪಿ ಐ ಹೇಗೆ ಗೊತ್ತಾ ಒಂದು ರೀತಿಯಲ್ಲಿ ಬಿಜೆಪಿ ರೀತಿ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular