BIG NEWS: ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದೆ ತರಕಾರಿ ಬೆಲೆ; ಟೊಮ್ಯಾಟೊ, ಬೆಳ್ಳುಳ್ಳಿ ದರ ನೋಡಿ ದಂಗಾದ ಗ್ರಾಹಕರು

ಬೆಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆ ನಡುವೆ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಟೊಮ್ಯಾಟೊ ದರವಂತು ಶತಕದ ಗಡಿ ದಾಟಿ 15 ದಿನಗಳ ಮೇಲಾಗಿದ್ದು, ಈಗ 120ರ ಗಡಿ ದಾಟಿದೆ.

ಇನ್ನು ಬೆಳ್ಳುಳ್ಳಿ ಬೆಲೆ ನೋಡಿದರೆ ದಂಗಾಗಬೇಕು. ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದ ಗ್ರಾಹಕರು ಬೆಲೆ ನೋಡಿಯೇ ವಾಪಸ್ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇಂದು ಟೊಮ್ಯಾಟೊ ದರ 123 ರೂ. ಆಗಿದೆ. ನುಗ್ಗೆಕಾಯಿ 114 ರೂ. ಬೇಬಿ ಕಾರ್ನ್ 75 ರೂ., ದಪ್ಪಮೆಣಸಿನಕಾಯಿ 51 ರೂ, ಕ್ಯಾರೇಟ್ 79-8೦ ರೂ. ಆಗಿದೆ. ಬೀಟ್ರೂಟ್ 62 ರೂ., ಹಸಿಮೆಣಸು 60-65 ರೂ., ಆಲೂಗಡ್ಡೆ-39 ರೂ., ಬದನೆಕಾಯಿ 49 ರೂ. ಆಗಿದೆ.

ಇನ್ನು ಬೆಳ್ಳುಳ್ಳಿ -113-147 ರೂಪಾಯಿ ಆಗಿದೆ. ಶುಂಠಿ- 95 ರೂಪಾಯಿ, ಬಟಾಣಿ 105 , ಹುರಳಿಕಾಯಿ 51 ರೂಪಾಯಿ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read