HomeKarnatakaBIG NEWS: ಜೆಡಿಎಸ್ ಗೆ ಹಾಕುವ ಒಂದೊಂದು ಮತ ಕಾಂಗ್ರೆಸ್ ಗೆ ಹೋಗುತ್ತೆ; ವಿಪಕ್ಷಗಳ ವಿರುದ್ಧ...

BIG NEWS: ಜೆಡಿಎಸ್ ಗೆ ಹಾಕುವ ಒಂದೊಂದು ಮತ ಕಾಂಗ್ರೆಸ್ ಗೆ ಹೋಗುತ್ತೆ; ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ

ಬಳ್ಳಾರಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬವಾದಿ ಪಕ್ಷಗಳು, ಕುಟುಂಬವಾದಿ ಪಕ್ಷಗಳಿಂದ ಬಡವರ ಕಲ್ಯಾಣ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಸಂಡೂರಿನಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಜೆಡಿಎಸ್ ಗೆ ನೀಡುವ ಪ್ರತಿ ವೋಟ್ ಕೂಡ ಕಾಂಗ್ರೆಸ್ ಗೆ ಹೋಗುತ್ತೆ. ಹಾಗಾಗಿ ಬಿಜೆಪಿಗೆ ಮತನೀಡಿ ಎಂದು ಹೇಳಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಕರ್ನಾಟಕ ಕಾಂಗ್ರೆಸ್ ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ, ಬಡ ಜನರಿಗಾಗಿ ಏನೂ ಮಾಡಿಲ್ಲ. ಎರಡೂ ಪಕ್ಷಗಳು ಪರಿವಾರವಾದಿ ಪಕ್ಷಗಳು ಎಂದು ಗುಡುಗಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಅವಧಿಯಲ್ಲಿ ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆಯಲಾಗಿತ್ತು. ಪ್ರಧಾನಿ ಮೋದಿ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದ್ದಾರೆ. ಹಲವು ಬಾರಿ ಪಾಕಿಸ್ತಾನದಿಂದ ದಾಳಿಯಾದರೂ ಯುಪಿಎ ಸರ್ಕಾರ ಮೌನವಾಗಿತ್ತು. ಆದರೆ ಮೋದಿ ಸರ್ಕಾರ ಬಂದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular