HomeKarnatakaBIG NEWS: ಕೃಷ್ಣಮಠಕ್ಕೆ ಜಾಗಕೊಟ್ಟಿದ್ದು ಮುಸ್ಲಿಂ ರಾಜರು; ಮಿಥುನ್ ರೈ ಹೇಳಿಕೆಗೆ ವ್ಯಾಪಕ ಆಕ್ರೋಶ

BIG NEWS: ಕೃಷ್ಣಮಠಕ್ಕೆ ಜಾಗಕೊಟ್ಟಿದ್ದು ಮುಸ್ಲಿಂ ರಾಜರು; ಮಿಥುನ್ ರೈ ಹೇಳಿಕೆಗೆ ವ್ಯಾಪಕ ಆಕ್ರೋಶ

ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗಕೊಟ್ಟಿದ್ದು ಮುಸ್ಲಿಂರು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಮೂಡಬಿದರೆ ತಾಲೂಕಿನ ಪುತ್ತಿಗೆ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ, ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂದು ಹೇಳಿದ್ದಾರೆ. ಮಿಥುನ್ ರೈ ಅವರ ಹೇಳಿಕೆಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮುಸ್ಲಿಂ ಸಮುದಾಯದ ಓಲೈಕೆಗಾಗಿ ಮಿಥುನ್ ರೈ ಇಂತಹ ಹೇಳಿಕೆಕೊಡುತ್ತಿದ್ದಾರೆ. ಭಾರತ ಹಿಂದೂ ರಾಷ್ಟ್ರ ಮುಸ್ಲಿಂರು ಪಾಕಿಸ್ತಾನದಿಂದ ಅಥವಾ ಬೇರೆ ಯಾವುದೋ ದೇಶದಿಂದ ಭೂಮಿ ತಂದುಕೊಟ್ಟಿದ್ದಾರಾ ? ಒಂದು ವೇಳೆ ಮುಸ್ಲಿಂ ರಾಜರೇ ಕೊಟ್ಟಿದ್ದರೂ ನಮ್ಮ ಭೂಮಿಯನ್ನು ನಮಗೆ ಕೊಟ್ಟಿದ್ದಾರೆ. ಮಿಥುನ್ ರೈ ರಾಜಕಾರಣಕ್ಕಾಗಿ ಅನಗತ್ಯವಾಗಿ ಗೊಂದಲ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇದು ಕೃಷ್ಣಮಠಕ್ಕೂ ಅವರು ಮಾಡುತ್ತಿರುವ ಅಪಮಾನ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular