BIG NEWS: ಕಳೆದ ಐದು ವರ್ಷಗಳಲ್ಲಿ ರಾಜ್ಯದ 4,257 ರೈತರು ಆತ್ಮಹತ್ಯೆಗೆ ಶರಣು

‘ಅನ್ನದಾತ’ ಎಂದೇ ಕರೆಯಲ್ಪಡುವ ರೈತರ ಬದುಕು ಬಲು ಕಷ್ಟಕರವಾಗಿರುತ್ತದೆ. ಜಾಸ್ತಿ ಮಳೆಯಾದರೂ ಕಷ್ಟ, ಮಳೆ ಬಾರದಿದ್ದರೂ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಒಂದೊಮ್ಮೆ ಒಳ್ಳೆ ಬೆಳೆ ಸಿಕ್ಕರೂ ಸಹ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇರುವುದಿಲ್ಲ.

ಇಂತಹ ಸಂದರ್ಭದಲ್ಲಿ ಸಾಲ ಸೋಲು ಮಾಡಿಕೊಂಡು ಬೆಳೆ ಬೆಳೆದ ರೈತರು ಹತಾಶರಾಗುತ್ತಾರೆ. ಹೀಗಾಗಿ ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಬರುತ್ತಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕಿದೆ.

ಇದರ ಮಧ್ಯೆ ಕಳೆದ ಐದು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ವಿವರವನ್ನು ಬಿಡುಗಡೆ ಮಾಡಲಾಗಿದ್ದು, 2018 ರಿಂದ ಈಚೆಗೆ ಒಟ್ಟು 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿಗಳ ನೆರವು ಹಾಗೂ ಮೃತ ರೈತನ ಪತ್ನಿಗೆ ಮಾಸಿಕ 2000 ರೂಪಾಯಿ ಪೆನ್ಷನ್ ನೀಡುತ್ತಿದ್ದು, ಆದರೆ 4,257 ಆತ್ಮಹತ್ಯೆ ಪ್ರಕರಣಗಳ ಪೈಕಿ ಈವರೆಗೆ 3,442 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read