HomeKarnatakaBIG NEWS: ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕ್ತೀನಿ ಅಂತ ಪ್ರಧಾನಿ ಮೋದಿ ಯಾರ...

BIG NEWS: ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕ್ತೀನಿ ಅಂತ ಪ್ರಧಾನಿ ಮೋದಿ ಯಾರ ಅನುಮತಿ ಪಡೆದು ಘೋಷಿಸಿದ್ರು ? ಸಚಿವ ಕೆ.ಎನ್. ರಾಜಣ್ಣ ಪ್ರಶ್ನೆ

ಹಾಸನ: ಈ ಹಿಂದೆ ಪ್ರಧಾನಿ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಘೋಷಣೆ ಮಾಡಿದ್ರು. ಅವರು ಯಾರ ಅನುಮತಿ ಪಡೆದು ಘೋಷಣೆ ಮಾಡಿದ್ರು ? ಎಂದು ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ರಾಜಣ್ಣ, ರಾಜ್ಯ ಸರ್ಕಾರ ಉಚಿತ ಅಕ್ಕಿ ಘೋಷಣೆ ವೇಳೆ ಕೇಂದ್ರ ಆಹಾರ ನಿಗಮ -FCI ಜೊತೆ ಚರ್ಚೆ ನಡೆಸಿರಲಿಲ್ಲ ಎಂಬ ಆರೋಪ ಕೇಳಿಬಂದ ವಿಚಾರವಾಗಿ ಮಾತನಾಡಿ, ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕ್ತೀನಿ ಎಂದು ಪ್ರಧಾನಿ ಮೋದಿ ಹೇಳಿದ್ರು, ಅವರು ಯಾರ ಅನುಮತಿ ಪಡೆದು ಹೇಳಿದ್ರು? ಎಂದು ಕಿಡಿ ಕಾರಿದರು. ಎಫ್ ಸಿ ಐ ಜೊತೆ ಚರ್ಚಿಸಿ ನಾವು ಘೋಷಣೆ ಮಾಡಬೇಕಿಲ್ಲ. ಅವರೇನು ಪುಕ್ಕಟೆ ಕೊಡ್ತಾರಾ? ನಾವು ಖರೀದಿ ಮಾಡುವುದು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಹಾಸನ ಜಿಲ್ಲೆ ಉಸ್ತುವಾರಿ ಜವಾಬ್ದಾರಿಯನ್ನು ನಾನು ನಿರೀಕ್ಷಿಸಿರಲಿಲ್ಲ ಎಂದ ಸಚಿವರು, ನಾನು ತುಮಕೂರಿನವನು ನನಗೆ ಹಾಸನ ಜಿಲ್ಲೆ ಯಾಕೆ ಕೊಟ್ಟರು ಗೊತ್ತಿಲ್ಲ, ಬೇರೆಕಡೆ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಶಿವಲಿಂಗೇಗೌಡರು ಸಚಿವರಾಗಿದ್ರೆ ಅವರೇ ಉಸ್ತುವಾರಿ ಆಗೋರು. ಮುಂದೆ ಅವರೂ ಸಚಿವರಾಗಬಹುದು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular