HomeKarnatakaBIG NEWS: ಎನ್.ಡಿ.ಎ. ಗೂ ಆಹ್ವಾನ ಇಲ್ಲ, ಮಹಾಮೈತ್ರಿ ಸಭೆಗೂ ಕರೆದಿಲ್ಲ; ಯಾವ ಸಭೆಯೂ ನನಗೆ...

BIG NEWS: ಎನ್.ಡಿ.ಎ. ಗೂ ಆಹ್ವಾನ ಇಲ್ಲ, ಮಹಾಮೈತ್ರಿ ಸಭೆಗೂ ಕರೆದಿಲ್ಲ; ಯಾವ ಸಭೆಯೂ ನನಗೆ ಗೊತ್ತಿಲ್ಲ ಎಂದ HDK

ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಕಿಂಚಿತ್ತೂ ಗಮನ ಇಲ್ಲ. ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಬಗ್ಗೆ ಪರುಶೀಲಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ರಾಜಕೀಯ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಮಹಾ ಮೈತ್ರಿಕೂಟದ ಸಭೆ ಆಯೋಜಿಸಿದ್ದಾರೆ. ಇದರಿಂದ ಯಾವ ಪ್ರಯೋಜನವಾಗಲಿದೆ? ಎಂದು ಪ್ರಶ್ನಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾ ಮೈತ್ರಿಕೂಟ ಸಭೆ ಹಾಗೂ ಎನ್ ಡಿ ಎ ಸಭೆಗೆ ಆಹ್ವಾನ ನೀಡಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ NDAಗೂ ಆಹ್ವಾನವಿಲ್ಲ, ಮಹಾಮೈತ್ರಿ ಸಭೆಗೂ ಕರೆದಿಲ್ಲ. ಯಾವ ಸಭೆ ಬಗ್ಗೆಯೂ ನನಗೆ ಗೊತ್ತಿಲ್ಲ. ಯಾವ ಕಡೆಯಿಂದ ಆಹ್ವಾನ ಬಂದರೂ ಚರ್ಚೆ ಮಾಡುತ್ತೇವೆ ಮುಂದೆ ನೋಡೋಣ ಎಂದು ಹೇಳಿದರು.

ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ವಿಚಾರವಾಗಿ ನನಗೆ ಯಾವ ರಾಜಕೀಯ ಪಕ್ಷದ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ, ಕರ್ನಾಟಕದ ಜನರ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಅಷ್ಟೇ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular