HomeKarnatakaBIG NEWS: ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ; ದೇಶ ಲೂಟಿ ಮಾಡಿದವರು ಒಂದಾಗಿದ್ದಾರೆ;...

BIG NEWS: ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ; ದೇಶ ಲೂಟಿ ಮಾಡಿದವರು ಒಂದಾಗಿದ್ದಾರೆ; ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಉಡುಪಿ: ವಿಪಕ್ಷ ನಾಯಕರ ಮೈತ್ರಿಕೂಟ ಸಭೆ ವಿಚಾರವಾಗಿ ಕಿಡಿ ಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶವನ್ನು 60 ವರ್ಷಗಳ ಕಾಲ ಲೂಟಿ ಮಾಡಿದವರು ಇದೀಗ ಒಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ,ಎಲ್ಲಾ ವಿಪಕ್ಷಗಳು ಒಂದಾಗಿ ಈಸ್ಟ್ ಇಂಡಿಯಾ ಕಂಪನಿ ಮಾಡಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯೇ ಟಾರ್ಗೆಟ್ ಎಂದು ಗುಡುಗಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಬಾರಿಯಂತೆ ಮತ್ತೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ. ಅದು ಇಂಡಿಯಾ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular