HomeKarnatakaBIG NEWS: ಅವರು ಅಶ್ವತ್ಥನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ; ಬಿ.ಕೆ. ಹರಿಪ್ರಸಾದ್ ಕಿಡಿ

BIG NEWS: ಅವರು ಅಶ್ವತ್ಥನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ; ಬಿ.ಕೆ. ಹರಿಪ್ರಸಾದ್ ಕಿಡಿ

ಕಾರವಾರ: ಟಿಪ್ಪು ಹೊಡೆದಂತೆ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಕಿಡಿಕಾರಿರುವ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಅವರು ಅಶ್ವತ್ಥನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಅಮಿತ್ ಶಾ ಅವರು ಅಸ್ವಸ್ಥ ನಾರಾಯಣ ಎಂದು ಸರಿಯಾಗಿ ಹೇಳಿದ್ದಾರೆ. ಅಶ್ವತ್ಥನಾರಾಯಣ ಅವರಿಗೆ ಮಾನಸಿಕ ಅಸ್ವಸ್ಥತೆ ಇದೆ. ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಸರಿಪಡಿಸಬೇಕು. ಏಷ್ಯಾದ ದೊಡ್ಡ ಮೆಂಟಲ್ ಅಸ್ಪತ್ರೆ ಬೆಂಗಳೂರಿನಲ್ಲಿದೆ. ಅಲ್ಲಿಗೆ ಸೇರಿಸಬೇಕು ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯರನ್ನು ಟಿಪ್ಪು ಹೊಡೆದಂತೆ ಹೊಡೆದು ಹಾಕಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಸಚಿವ ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular