
ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಪೀಠದ ನ್ಯಾಯಮೂರ್ತಿ ನಟರಾಜನ್ ಅಂಗೀಕರಿಸಿದ್ದು, ಹೀಗಾಗಿ ವಿರುಪಾಕ್ಷಪ್ಪನವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
48 ಗಂಟೆಯೊಳಗಾಗಿ ಲೋಕಾಯುಕ್ತದ ವಿಚಾರಣಾಧಿಕಾಗಳ ಮುಂದೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದ್ದು, ಇಬ್ಬರ ಶ್ಯೂರಿಟಿ ಹಾಗೂ ಐದು ಲಕ್ಷ ರೂಪಾಯಿ ಠೇವಣಿಯೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.

