HomeKarnatakaSHOCKING: ಕಾರಂಜಾ ಡ್ಯಾಂ ಕಾಲುವೆ ಬಿದ್ದು ತಂದೆ-ಮಗ ದುರ್ಮರಣ

SHOCKING: ಕಾರಂಜಾ ಡ್ಯಾಂ ಕಾಲುವೆ ಬಿದ್ದು ತಂದೆ-ಮಗ ದುರ್ಮರಣ

ಬೀದರ್: ಕಾಲು ಜಾರಿ ಕಾಲುವೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆ ಹಾಗೂ ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಾರಂಜಾ ಡ್ಯಾಂ ಕಾಲುವೆಯಲ್ಲಿ ನಡೆದಿದೆ.

ಹಳ್ಳಿಖೇಡ್(ಬಿ) ಗ್ರಾಮದ ವಿಶ್ವನಾಥ(50) ಮತ್ತು ಅಮರೇಶ(23) ಮೃತ ದುರ್ದೈವಿಗಳು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೋಲಿಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ಮೃತದೇಹ ಹೊರತೆಗೆದಿದ್ದಾರೆ

ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ ವಾಪಸ್ ಊರಿನತ್ತ ತಂದೆ-ಮಗ ಇಬ್ಬರೂ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಮರೇಶ್ ಕೈಕಾಲು ತೊಳೆದುಕೊಳ್ಳಲೆಂದು ಕಾಲುವೆಗೆ ಇಳಿದಿದ್ದ. ಆ ಸಂದರ್ಭದಲ್ಲಿ ಕಾಲು ಜಾರಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದಿದ್ದಾನೆ. ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಂದೆ ವಿಶ್ವನಾಥ ಜಮಾದಾರ್ ಕೂಡಲೇ ಆತನ ರಕ್ಷಣೆಗೆಂದು ಹೋಗಿದ್ದಾರೆ. ಆದರೆ ತಂದೆ-ಮಗ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಧನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular