HomeKarnatakaಕಟ್ಟಡದ ಪೇಂಟಿಂಗ್ ವೇಳೆ ದುರಂತ: 3ನೇ ಮಹಡಿಯಿಂದ ಬಿದ್ದು ಕಾರ್ಮಿಕ ದುರ್ಮರಣ

ಕಟ್ಟಡದ ಪೇಂಟಿಂಗ್ ವೇಳೆ ದುರಂತ: 3ನೇ ಮಹಡಿಯಿಂದ ಬಿದ್ದು ಕಾರ್ಮಿಕ ದುರ್ಮರಣ

ಬೀದರ್: ಕಟ್ಟಡದ ಪೇಂಟಿಂಗ್ ಮಾಡಲು ಹೋಗಿ ಯುವಕನೊಬ್ಬ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ.

23 ವರ್ಷದ ಇಮ್ಯಾನುಯೆಲ್ ಮೃತ ಕಾರ್ಮಿಕ. ಕಟ್ಟಡದ ಪೇಂಟಿಂಗ್ ಕೆಲಸಕ್ಕೆಂದು ಹೋಗಿದ್ದ ಯುವಕ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಯುವಕನ ತಲೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕಟ್ಟಡದಿಂದ ಯುವಕ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಯುವಕನ ಕುಟುಂಬದವರು ಗುತ್ತಿಗೆದಾರರ ಹಾಗೂ ಮನೆಯ ಮಾಲೀಕ ಕೆಲಸಕ್ಕೆಂದು ಕರೆದೊಯ್ದು ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular