HomeLatest NewsBREAKING: ಬಿಡದಿ ಭೂಮಿಗಾಗಿ ರಣರಂಗವಾಯ್ತು ರಾಮನಗರ: ಅಧಿಕಾರಿಗಳನ್ನು ಅಟ್ಟಾಡಿಸಿ ಪೊರಕೆ, ಕಲ್ಲುಗಳಿಂದ ಹೊಡೆದ ರೈತ ಮಹಿಳೆಯರು;...

BREAKING: ಬಿಡದಿ ಭೂಮಿಗಾಗಿ ರಣರಂಗವಾಯ್ತು ರಾಮನಗರ: ಅಧಿಕಾರಿಗಳನ್ನು ಅಟ್ಟಾಡಿಸಿ ಪೊರಕೆ, ಕಲ್ಲುಗಳಿಂದ ಹೊಡೆದ ರೈತ ಮಹಿಳೆಯರು; ಕಾರುಗಳ ಗಾಜು ಪುಡಿ ಪುಡಿ

ರಾಮನಗರ: ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿಡದಿ ಭೂಮಿಗಾಗಿ ಬೆಂಗಳೂರಿನ ದಕ್ಷಿಣ ತಾಲೂಕು ರಾಮನಗರ ರಣರಂಗವಾಗಿ ಮಾರ್ಪಟ್ಟಿದೆ. ಪ್ರತಿಭಟನಾ ನಿರತ ರೈತ ಮಹಿಳೆಯರು ಇಂದು ಅಧಿಕಾರಿಗಳನ್ನು ಅಟ್ಟಾಡಿಸಿ ಹೊಡೆದಿರುವ ಘಟನೆ ನಡೆದಿದೆ.

ಟೌನ್ ಶಿಪ್ ಗೆ ಒಪ್ಪಿಗೆ ಸೂಚಿಸಿ ಕೆಲ ರೈತರು ಪರಿಹಾರ ಪಡೆದು ಭೂಮಿ ನೀಡಲು ಮುಂದಾಗಿದ್ದಾರೆ, ಹಲವು ರೈತರು ಭೂಮಿ ಕಳೆದುಕೊಳ್ಳಲು ಸಿದ್ಧರಿಲ್ಲ. ಟೌನ್ ಶಿಪ್ ನಿರ್ಮಾಣಕ್ಕೆ ತಮ್ಮ ವಿರೋಧವಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಕೆಲ ರೈತರಿಗೆ ಮಾತ್ರ ಪರಿಹಾರ ನೀಡಿದ್ದು, ಇನ್ನೂ ಹಲವರಿಗೆ ಪರಿಹಾರ ನೀಡುವುದು ಬಾಕಿಯಿದೆ. ಈ ನಡುವೆ ಜಿಬಿಎ ಅಧಿಕಾರಿಗಳು ಭೂಮಿ ಸರ್ವೆ ಕಾರ್ಯಕ್ಕೆಂದು ಬಿಡದಿಯ ಮಂದಲಹಳ್ಳಿಗೆ ಭೇಟಿ ನೀಡಿದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಪ್ರತಿಭಟನಾ ನಿರತ ರೈತ ಮಹಿಳೆಯರು ಅಧಿಕಾರಿಗಳು ಕಾರಿನಿಂದ ಇಳಿಯುತ್ತಿದ್ದಂತೆ ಯಾವುದೇ ಕಾರಣಕ್ಕೂ ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ. ನಮ್ಮ ಭೂಮಿ ನಮ್ಮ ಹಕ್ಕು. ಸರ್ವೆಗೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅದಾಗ್ಯೂ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾಗುತ್ತಿದ್ದಂತ್ತೆ ರೊಚ್ಚಿಗೆದ್ದ ರೈತ ಮಹಿಳೆಯರು ಪೊರಕೆ ಹಿಡಿ ಅಧಿಕಾರಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಹಿಗ್ಗಾ ಮುಗ್ಗಾ ಹೊಡೆದಿದ್ದಾರೆ.

ಮತ್ತಷ್ಟು ರೈತ ಮಹಿಳೆಯರು ಕಲ್ಲುಗಳಿಂದ ಅಧಿಕಾರಿಗಳ ಕಾರಿನ ಮೇಲೆ ದಾಳಿ ನಡೆಸಿ, ಎರಡು ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ. ನಮ್ಮನ್ನು ಬಂಧಿಸೊದರೂ ನಾವು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ರೈತರು ಕಿಡಿಕಾರಿದ್ದಾರೆ. ಅಧಿಕಾರಿಗಳ ಮೇಲೆ ಮನಬಂದಂತೆ ರೈತರು ಹಾಗೂ ಗ್ರಾಮಸ್ಥರು ಥಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಹಲವು ರೈತ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳನ್ನು ರಕ್ಷಿಸಿ ಕಾರಿನಲ್ಲಿ ವಾಪಸ್ ಕಳುಹಿಸಿದ್ದಾರೆ. ಬಿಡದಿ ಭೂಮಿಗಾಗಿ ರಾಮನಗರ ಅಕ್ಷರಶಃ ರಣರಂಗವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular