HomeEntertainmentರಾಷ್ಟ್ರಗೀತೆ ಕೇಳಿ ಪೋಸ್ ನೀಡುವುದನ್ನೇ ನಿಲ್ಲಿಸಿದ ಭೂಮಿ ಪೆಡ್ನೇಕರ್: ನಟಿಯ ದೇಶಪ್ರೇಮಕ್ಕೆ ಸಲಾಮ್!

ರಾಷ್ಟ್ರಗೀತೆ ಕೇಳಿ ಪೋಸ್ ನೀಡುವುದನ್ನೇ ನಿಲ್ಲಿಸಿದ ಭೂಮಿ ಪೆಡ್ನೇಕರ್: ನಟಿಯ ದೇಶಪ್ರೇಮಕ್ಕೆ ಸಲಾಮ್!

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮೆಚ್ಚುಗೆಗೆ ಪಾತ್ರವಾಗಿದೆ. ಆಗಸ್ಟ್ 23ರ ಭಾನುವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಭೂಮಿ ಅವರು ರೆಡ್ ಕಾರ್ಪೆಟ್ ಮೇಲೆ ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಜನ ಗಣ ಮನ ಕೇಳಿಬಂದಿದೆ.

ರಾಷ್ಟ್ರಗೀತೆಯ ಧ್ವನಿ ಕೇಳಿಸುತ್ತಿದ್ದಂತೆಯೇ ಭೂಮಿ ಪೆಡ್ನೇಕರ್ ತಕ್ಷಣವೇ ಪೋಸ್ ನೀಡುವುದನ್ನು ನಿಲ್ಲಿಸಿ, ಒಂದು ಕ್ಷಣ ರಾಷ್ಟ್ರಗೀತೆ ಎಂದು ಛಾಯಾಗ್ರಾಹಕರಿಗೆ ತಿಳಿಸಿ ರೆಡ್ ಕಾರ್ಪೆಟ್‌ನಿಂದ ಪಕ್ಕಕ್ಕೆ ಸರಿದರು. ನಂತರ ಅತ್ಯಂತ ಗೌರವದಿಂದ ನೆಟ್ಟಗೆ ನಿಂತು ರಾಷ್ಟ್ರಗೀತೆಗೆ ಗೌರವ ಸಮರ್ಪಿಸಿದರು. ಗೀತೆ ಮುಗಿದ ನಂತರವಷ್ಟೇ ಅವರು ಮತ್ತೆ ಕೆಂಪು ಹಾಸಿನ ಮೇಲೆ ಬಂದು ಫೋಟೋಗಳಿಗೆ ಪೋಸ್ ನೀಡಿದರು.

ಈ ಇಡೀ ಸನ್ನಿವೇಶ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಸಖತ್ ವೈರಲ್ ಆಗಿದೆ. ದೇಶಪ್ರೇಮ ಹಾಗೂ ರಾಷ್ಟ್ರಗೀತೆಗೆ ನಟಿ ನೀಡಿದ ಗೌರವವನ್ನು ಕಂಡ ನೆಟ್ಟಿಗರು ಭೂಮಿ ಪೆಡ್ನೇಕರ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಸಂವೇದನಾಶೀಲ ನಡವಳಿಕೆ ಪ್ರದರ್ಶಿಸಿದ ನಟಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಭೂಮಿ ಪೆಡ್ನೇಕರ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು ಇತ್ತೀಚೆಗೆ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾದ ‘ದಲ್ದಲ್’ ವೆಬ್ ಸರಣಿಯಲ್ಲಿ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಅರ್ಜುನ್ ಕಪೂರ್ ಜೊತೆಗೂಡಿ ನಟಿಸಿದ್ದ ‘ಮೇರೆ ಹಸ್ಬೆಂಡ್ ಕಿ ಬೀವೈ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular