HomeEntertainmentಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿಜೆಪಿ ಟಿಕೆಟ್ ಆಕಾಂಕ್ಷಿ; ಪುತ್ರನ ವಿರುದ್ಧವೇ ನಾಮಪತ್ರ ಸಲ್ಲಿಸಿದ ತಾಯಿ...!

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿಜೆಪಿ ಟಿಕೆಟ್ ಆಕಾಂಕ್ಷಿ; ಪುತ್ರನ ವಿರುದ್ಧವೇ ನಾಮಪತ್ರ ಸಲ್ಲಿಸಿದ ತಾಯಿ…!

ಬಿಹಾರದ ಕಾರಾಕಾಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಖ್ಯಾತ ಭೋಜ್ಪುರಿ ನಟ ಪವನ್ ಸಿಂಗ್, ಈ ಕ್ಷೇತ್ರವನ್ನು ಮೈತ್ರಿಕೂಟ ಪಕ್ಷಕ್ಕೆ ಬಿಟ್ಟುಕೊಟ್ಟ ಕಾರಣ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಇದೇ ಕ್ಷೇತ್ರದಿಂದ ಪವನ್ ಸಿಂಗ್ ಅವರ ತಾಯಿ ಪ್ರತಿಮಾ ಕೂಡ ಈಗ ನಾಮಪತ್ರ ಸಲ್ಲಿಸಿದ್ದಾರೆ.

ಪವನ್ ಸಿಂಗ್ ಅವರಿಗೆ ಮೊದಲಿಗೆ ಪಶ್ಚಿಮ ಬಂಗಾಳದ ಅಸಾನ್ಸೋಲ್ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದ್ದು, ಆದರೆ ಇವರ ಕೆಲವೊಂದು ಸಿನಿಮಾಗಳಲ್ಲಿ ಮಹಿಳೆಯರ ಕುರಿತು ಕೀಳಾಗಿ ಚಿತ್ರಿಸಿದ್ದ ಹಾಡುಗಳು ವೈರಲ್ ಆದ ಬಳಿಕ ಅಲ್ಲಿಂದ ಸ್ಪರ್ಧಿಸಲು ಹಿಂದೇಟು ಹಾಕಿ ಈ ವಿಚಾರವನ್ನು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದರು.

ಅಲ್ಲದೆ ಬಿಹಾರದ ಕಾರಾಕಾಟ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಪವನ್ ಸಿಂಗ್ ಕೇಳಿದ್ದು, ಆದರೆ ಈ ಕ್ಷೇತ್ರವನ್ನು ಮೈತ್ರಿ ಪಕ್ಷವಾದ ರಾಷ್ಟ್ರೀಯ ಲೋಕಮೋರ್ಚಾಗೆ ಬಿಟ್ಟುಕೊಡಲಾಗಿತ್ತು. ಹೀಗಾಗಿ ಉಪೇಂದ್ರ ಕುಶ್ವಾಹ ಇಲ್ಲಿಂದ ನಾಮಪತ್ರ ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular