HomeKarnatakaBIG NEWS: ಮಹಿಳೆ ಕಿಡ್ನ್ಯಾಪ್ ಕೇಸ್: ಭವಾನಿ ರೇವಣ್ಣ ಕಾರು ಚಾಲಕನಿಗೆ ಸಂಕಷ್ಟ

BIG NEWS: ಮಹಿಳೆ ಕಿಡ್ನ್ಯಾಪ್ ಕೇಸ್: ಭವಾನಿ ರೇವಣ್ಣ ಕಾರು ಚಾಲಕನಿಗೆ ಸಂಕಷ್ಟ

ಬೆಂಗಳೂರು: ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಕಾರು ಚಾಲಕನಿಗೂ ಸಂಕಷ್ಟ ಎದುರಾಗಿದೆ.

ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಗೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಾಲಕ ಅಜಿತ್ ನಾಪತ್ತೆಯಾಗಿದ್ದು, ಹೊಳೆನರಸೀಪುರದಲ್ಲಿರುವ ಅಜಿತ್ ಮನೆಗೆ ಎಸ್ಐಟಿ ನೋಟಿಸ್ ಅಂಟಿಸಿದೆ.

ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಜಿತ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾಗಿ ದೂರು ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಅಜಿತ್ ಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅಲ್ಲದೇ ವಿಡಿಯೋ ಚಿತ್ರೀಕರಣ ಮಾಡಿದ್ದು ಕೂಡ ಅಜಿತ್ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ನಾಪತ್ತೆಯಾಗಿರುವ ಅಜಿತ್ ಗಾಗಿ ಎಸ್ಐಟಿ ಹುಡುಕಾಟವನ್ನೂ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular