HomeIndiaಬಿಪಿಎಲ್, ಎಪಿಎಲ್ ಇಲ್ಲದ ಜನಸಾಮಾನ್ಯರಿಗೆ ಶಾಕ್: ಕಡಿಮೆ ದರದ 'ಭಾರತ್ ಅಕ್ಕಿ' ಯೋಜನೆ ಸ್ಥಗಿತ

ಬಿಪಿಎಲ್, ಎಪಿಎಲ್ ಇಲ್ಲದ ಜನಸಾಮಾನ್ಯರಿಗೆ ಶಾಕ್: ಕಡಿಮೆ ದರದ ‘ಭಾರತ್ ಅಕ್ಕಿ’ ಯೋಜನೆ ಸ್ಥಗಿತ

ಬೆಂಗಳೂರು: ಲೋಕಸಭೆ ಚುನಾವಣೆಗೂ ಮೊದಲು ಶುರುವಾಗಿದ್ದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಭಾರತ್ ಅಕ್ಕಿ ಯೋಜನೆ ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಇಲ್ಲದ ಜನಸಾಮಾನ್ಯರಿಗೆ ಅಗ್ಗದ ಪಡಿತರ ಯೋಜನೆಗೆ ಸ್ಥಗಿತಗೊಳಿಸಲಾಗಿದೆ. ಈ ಯೋಜನೆ ಅಡಿ ಕೆಜಿಗೆ 29 ರೂಪಾಯಿಗೆ ಅಕ್ಕಿ, 27.50ರೂ. ಗೆ ಗೋಧಿ ಹಿಟ್ಟು, 60 ರೂಪಾಯಿಗೆ ಕಡ್ಲೆ ಬೇಳೆ ವಿತರಿಸಲಾಗುತ್ತಿತ್ತು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಿಸಲು ಯೋಜನೆ ರೂಪಿಸಲಾಗಿತ್ತು. ಗ್ರಾಹಕರಿಂದಲೂ ಭಾರತ್ ಅಕ್ಕಿಗೆ ಭಾರಿ ಬೇಡಿಕೆ ಇತ್ತು. ಆದರೆ ಯೋಜನೆಯನ್ನು ದಿಢೀರ್ ನಿಲ್ಲಿಸಲಾಗಿದೆ.

ಕೇಂದ್ರದ ಆದೇಶದಂತೆ ಸಾಮಗ್ರಿಗಳನ್ನು ಜೂ.10ರವರೆಗೆ ಸರಬರಾಜು ಮಾಡಲಾಗಿದ್ದು, ನಂತರ ಸಾಮಗ್ರಿ ಪೂರೈಕೆಯಾಗದ ಕಾರಣ ಸದ್ಯಕ್ಕೆ ವಿತರಣೆ ಸ್ಥಗಿತಗೊಂಡಿದೆ. 2024ರ ಫೆಬ್ರವರಿ 2ರಿಂದ ಭಾರತ್ ಅಕ್ಕಿ ಯೋಜನೆ ಆರಂಭಿಸಲಾಗಿತ್ತು. ಅಕ್ಕಿಮ ಗೋಧಿ ತಲಾ 10 ಕೆಜಿ, ಕಡ್ಲೆಬೇಳೆ ಐದು ಕೆಜಿ ಬ್ಯಾಗ್ ಗಳಲ್ಲಿ ನೀಡಲಾಗುತ್ತಿತ್ತು, ಮೊಬೈಲ್ ವ್ಯಾನ್ ಮತ್ತು ಮಾಲ್ ಗಳಲ್ಲಿಯೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಇದ್ದು, ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಲಾಗಿದೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular