HomeKarnatakaವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದಾರೆ; ನಾನು ಪಿ ಹೆಚ್ ಡಿ ಮಾಡಿದ್ದೇನೆ: ಕಿಡಿಗೇಡಿಗಳಂತೆ ವರ್ತಿಸುವುದು ಸರಿಯಲ್ಲ:...

ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದಾರೆ; ನಾನು ಪಿ ಹೆಚ್ ಡಿ ಮಾಡಿದ್ದೇನೆ: ಕಿಡಿಗೇಡಿಗಳಂತೆ ವರ್ತಿಸುವುದು ಸರಿಯಲ್ಲ: ಬಿ.ಕೆಹರಿಪ್ರಸಾದ್ ವಾಗ್ದಾಳಿ

ಶಿವಮೊಗ್ಗ: 2028ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಭರತ್ ಜೋಡೋ-2 ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿದೆ.

ಕಮಲ ಕೋಟೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕ್ಷೇತ್ರ ಶಿವಮೊಗ್ಗದ ಶಿಕಾರಿಪುರದಿಂದಲೇ ಭಾರತ್ ಜೋಡೋ-2 ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಸೇವಾದಳದ ಬಾವುಟ ಹಾರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಮ್ಮ ಬಾವುಟ, ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ. ಕಿಡಿಗೇಡಿಗಳಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ ಎಲ್ ಕೆಜಿಯಲ್ಲಿದ್ದಾರೆ. ನಾನು ಪಿಹೆಚ್ ಡಿ ಮಾಡಿದ್ದೇನೆ. ವಿಜಯೇಂದ್ರ ಬಹಳ ವೀರರು ಶೂರರು ಹಾಗಾಗಿ ನಮ್ಮ ಪಕ್ಷದ ಬಾವುಟ ಹಾರುದು ಹಾಕಿದ್ದಾರೆ. ನಮಗೆ ಕೂತ ಜಾಗದಲ್ಲೇ ಬಾವುಟ ಹಾಅಕಿಸುವ, ಬ್ಯಾನರ್ ಹಾಕಿಸುವ ಶಕ್ತಿ ಇದೆ. ಆದರೆ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಈ ರೀತಿ ಬಾವುಟ, ಬ್ಯಾನರ್ ಹರಿದು ಹಾಕಿ ಕಿಡಿಗೇಡಿಗಳಂತೆ ವರ್ತಿಸಬಾರದು ಎಂದು ವಾಗ್ದಾಳಿ ನಡೆಸಿದರು.

17 ಕೋಟಿ ಆರ್ ಟಿ ಜಿಎಸ್ ಮಾಡಿಸಿಕೊಂಡು ಅಪ್ಪನನ್ನೇ ಜೈಲಿಗೆ ಕಳುಹಿಸಿದವರು. ಭ್ರಷ್ಟಾಚಾರದಲ್ಲಿ ಪ್ರಪಂಚಕ್ಕೆ ಮಾದರಿಯಾದವರು. ಇಂತವರಿಂದ ನಾವು ಕಲಿಯಬೇಕಿಲ್ಲ. ಬಿಜೆಪಿ ಕ್ಷೇತ್ರದಿಂದ ಪಾದಯಾತ್ರೆ ಮಾಡಬಾರದು ಎಂಬುದು ಇಲ್ಲ. ಸಂವಿಧಾನದಲ್ಲಿ ಯಾರು ಎಲ್ಲಿಂದ ಬೇಕಾದರೂ ಪಾದಯಾತ್ರೆ ಮಾಡಬಹುದು ಎಂದು ಗುಡುಗಿದರು.

ಶಿವಸೇನೆ ನಾಯಕ ಪ್ರದೀಪ್ ಪುರ್ಣೇಕರ್ ಗುಂಡಿಕ್ಕಿ ಹತ್ಯೆ

ಥಾಣೆ: ಶಿವಸೇನೆಯ ನಾಯಕ ಪ್ರದೀಪ್ ಪುರ್ಣೇಕರ್ ಅವರ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ದುರ್ಘಟನೆ ನಡೆದಿದೆ. ದುಷ್ಕರ್ಮಿಗಳಿಬ್ಬರು ಪ್ರದೀಪ್ ಪುರ್ಣೇಕರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಯಗೊಂಡಿದ್ದ ಪ್ರದೀಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾನಪಾಡ ಉಪವಿಭಾಗದ ಮುಖ್ಯಸ್ಥಾಗಿ ಪ್ರದೀಪ್ ಪುರ್ಣೇಕರ್ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರದೀಪ್ ತಮ್ಮ ಮಾನಪಾಡ ಕಚೇರಿಯಲ್ಲಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಕಚೇರಿಗೆ ನುಗ್ಗಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಎರಡಕ್ಕಿಂತ ಹೆಚ್ಚು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ ಪ್ರದೀಪ್ ಬಲಿಯಾಗಿದ್ದಾರೆ.

ಕಪುರ್‌ಬಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ದುಷ್ಕರ್ಮಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಥಾಣೆಯ ಪ್ರಮುಖ ನಿರ್ಗಮನ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಯಾವ ಕಾರಣಕ್ಕೆ ಪ್ರದೀಪ್ ಪುರ್ಣೇಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬುದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular