HomeKarnatakaಹುಚ್ಚುಚ್ಚಾಗಿ ಮಾತನಾಡುವುದನ್ನು ಸೋಮಶೇಖರ್ ನಿಲ್ಲಿಸಲಿ: ಶಾಸಕ ಭೈರತಿ ಬಸವರಾಜ್ ವಾಗ್ದಾಳಿ

ಹುಚ್ಚುಚ್ಚಾಗಿ ಮಾತನಾಡುವುದನ್ನು ಸೋಮಶೇಖರ್ ನಿಲ್ಲಿಸಲಿ: ಶಾಸಕ ಭೈರತಿ ಬಸವರಾಜ್ ವಾಗ್ದಾಳಿ

ಬೆಂಗಳೂರು: ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಶಾಸಕ ಭೈರತಿ ಬಸವರಾಜ್, ಸೋಮಶೇಖರ್ ಹುಚ್ಚುಚ್ಚಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಬಸವರಾಜ್, ತಮ್ಮ ವೈಯಕ್ತಿಕ ಲಾಭಕ್ಕಾಗಿ ಸೋಮಶೇಖರ್ ಹೀಗೆಲ್ಲ ಮಾತನಾಡುತ್ತಿದ್ದಾರೆ. ಹುಚ್ಚುಚ್ಚಾಗಿ ಮಾತನಾಡಿ ಬೇರೆಯವರ ತೇಜೋವಧೆ ಮಾಡಬಾರದು ಎಂದು ಕಿಡಿಕಾರಿದರು.

ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್ ಗೆ ಹೋಗುತ್ತಿಲ್ಲ. ಸುಮ್ಮನೇ ಊಹಿಸಿಕೊಂಡು ಹೇಳಿಕೆಗಳನ್ನು ನೀಡಬಾರದು. ಯಾವ 8 ಶಾಸಕರು ಹೋಗುತ್ತಿದ್ದಾರೆ? ಅವರಿಗೆ ಗೊತ್ತಿದ್ದರೆ ಹೆಸರು ಹೇಳಲಿ. ಅದನ್ನು ಬಿಟ್ಟು ಸುಮ್ಮನೇ ಹೇಳಿಕೆ ನೀಡುವುದಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವೆಲ್ಲರೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರು. ಈಗ ಬಿಜೆಪಿಯ ಕಟ್ಟಾಳುಗಳಾಗಿ ದುಡಿಯುತ್ತಿದ್ದೇವೆ. ಯಾರು ಕೂಡ ಕಾಂಗ್ರೆಸ್ ಗೆ ಹೋಗುತ್ತಿಲ್ಲ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular