HomeEntertainmentತೆಲುಗು ಹಾಗೂ ತಮಿಳು ಟ್ರೈಲರ್ ಬಿಡುಗಡೆ ಮಾಡಿದ 'ಭೈರತಿ ರಣಗಲ್' ಚಿತ್ರತಂಡ

ತೆಲುಗು ಹಾಗೂ ತಮಿಳು ಟ್ರೈಲರ್ ಬಿಡುಗಡೆ ಮಾಡಿದ ‘ಭೈರತಿ ರಣಗಲ್’ ಚಿತ್ರತಂಡ

ನರ್ತನ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ನವೆಂಬರ್ 29ಕ್ಕೆ ತೆಲುಗು, ತಮಿಳು, ಭಾಷೆಯಲ್ಲಿ ತೆರೆ ಕಾಣಲಿದ್ದು,  ಇದರ ಟ್ರೈಲರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆಯಾಗಿದೆ.

ಈ ಚಿತ್ರವನ್ನು ಗೀತಾ ಪಿಕ್ಚರ್ ಬ್ಯಾನರ್ ನಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದು, ಶಿವರಾಜ್ ಕುಮಾರ್ ಗೆ  ಜೋಡಿಯಾಗಿ ರುಕ್ಮಿಣಿ ವಸಂತ್  ಅಭಿನಯಿಸಿದ್ದಾರೆ, ಇನ್ನುಳಿದಂತೆ ರಾಹುಲ್ ಬೋಸ್, ಅವಿನಾಶ್, ದೇವರಾಜ್, ಛಾಯಾ ಸಿಂಗ್, ಶಬೀರ್ ಕಲ್ಲರಕ್ಕಲ್, ಮಧು ಗುರುಸ್ವಾಮಿ, ಹಿರಣ್ಣಯ್ಯ  ತೆರೆ ಹಂಚಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದು, ಆಕಾಶ ಹಿರೇಮಠ ಸಂಕಲನ, ನವೀನ್ ಕುಮಾರ್ ಛಾಯಾಗ್ರಹಣವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular