HomeKarnatakaBIG NEWS : ರಾಜ್ಯ ಮಟ್ಟದ 'ಉತ್ತಮ ಶಿಕ್ಷಕ' ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

BIG NEWS : ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು : 2023-24 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಆನ್- ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಈ ಸಂಬಂಧ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅರ್ಹ ಶಿಕ್ಷಕರು | ಸಹ ಶಿಕ್ಷಕರು / ವಿಶೇಷ ಶಿಕ್ಷಕರು | ಮುಖ್ಯ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ಅಂತರ್ಜಾಲ http://www.schooleducation. kar.nic.in ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ “ಲಿಂಕ್ ಮೂಲಕ ತಾವೇ ಸ್ವತಃ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ: 15-07-2023 ರಿಂದ 31-07-2023 ರವರೆಗೆ ಅವಕಾಶ ಕಲ್ಪಿಸಲಾಗಿತ್ತು, ಇದೀಗ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 05-08-2023 ರ ವರೆಗೆ ವಿಸ್ತರಿಸಲಾಗಿದೆ.

ಅದರಂತೆ, ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಸ್ಥರು, ಪ್ರಾಂಶುಪಾಲರು, ಶಿಕ್ಷಕರ ತರಬೇತಿ ಕೇಂದ್ರ(ಟಿ.ಟಿ.ಐ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು, ಆಡಳಿತ/ಅಭಿವೃದ್ಧಿ ಮತ್ತು ಪ್ರಾಂಶುಪಾಲರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿ.ಟಿ.ಇ) ಇವರುಗಳು 2023-24 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಅರ್ಹರು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ: 05-08-2023 ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿರುವ ಬಗ್ಗೆ ತಮ್ಮ-ತಮ್ಮ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ / ಸಹ ಶಿಕ್ಷಕರಿಗೆ / ವಿಶೇಷ ಶಿಕ್ಷಕರಿಗೆ / ಮುಖ್ಯ ಶಿಕ್ಷಕರಿಗೆ ವ್ಯಾಪಕ ಪ್ರಚಾರದ ಮೂಲಕ ಮತ್ತು ಕಛೇರಿ ಸೂಚನಾ ಫಲಕಯಲ್ಲಿ ಅಳವಡಿಸುವುದರ ಮೂಲಕ ಗಮನಕ್ಕೆ ತರಬೇಕೆಂದು ಆಯುಕ್ತರು ಶಿಕ್ಷಣ ಇಲಾಖೆ ಇವರು ಸುತ್ತೋಲೆ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular