HomeKarnatakaಸ್ವಯಂಚಾಲಿತ ಹೆಸರು ಬದಲಾವಣೆಗೆ ಬೆಸ್ಕಾಂ ನಾಂದಿ: ಸೌಲಭ್ಯವು ದೇಶದಲ್ಲೇ ಪ್ರಥಮ ; ಸಚಿವ ಕೆ.ಜೆ.ಜಾರ್ಜ್‌ ಮಾಹಿತಿ

ಸ್ವಯಂಚಾಲಿತ ಹೆಸರು ಬದಲಾವಣೆಗೆ ಬೆಸ್ಕಾಂ ನಾಂದಿ: ಸೌಲಭ್ಯವು ದೇಶದಲ್ಲೇ ಪ್ರಥಮ ; ಸಚಿವ ಕೆ.ಜೆ.ಜಾರ್ಜ್‌ ಮಾಹಿತಿ

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ನಗರ ಪ್ರದೇಶಗಳಲ್ಲಿನ ವಿದ್ಯುತ್ ಸ್ಥಾವರಗಳ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಈ ಸೌಲಭ್ಯ ಒದಗಿಸಿದ ದೇಶದ ಮೊದಲ ವಿದ್ಯುತ್ ವಿತರಣಾ ಕಂಪನಿ ಬೆಸ್ಕಾಂ ಆಗಿದೆ.

ಡಿಜಿಟಲ್ ವೇದಿಕೆಗೆ ಚಾಲನೆ ನೀಡಿ ಮಾತನಾಡಿದ ಇಂಧನ ಸಚಿವ ಕೆ. ಜೆ. ಜಾರ್ಜ್‌, ಗ್ರಾಹಕರು ಬೆಸ್ಕಾಂ ಕಚೇರಿಗೆ ಭೇಟಿ ನೀಡದೆ ತಾವು ಕುಳಿತಲ್ಲಿಂದಲೇ ವಿದ್ಯುತ್ ಸಂಪರ್ಕದ ಹೆಸರು ಬದಲಾಯಿಸಿಕೊಳ್ಳಬಹುದು. ಐಟಿ ಬಳಸಿ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆ ನೀಡುವ ಇಲಾಖೆಯ ಪ್ರಮುಖ ಯೋಜನೆ ಇದಾಗಿದೆ. ಜಿಬಿಎ (GBA) ವ್ಯಾಪ್ತಿಯ ಇ-ಖಾತಾ ಮ್ಯೂಟೇಷನ್‌ ಹೊಂದಿರುವ ಹಾಗೂ ಬೆಸ್ಕಾಂ ನಗರ ಪ್ರದೇಶದಲ್ಲಿರುವ ಆಸ್ತಿ ಇ-ಪಿಐಡಿ (e-PID) ಹೊಂದಿರುವ ಅಥವಾ ಹೊಂದಿಲ್ಲದ ಗ್ರಾಹಕರು ಈ ಸೇವೆ ಪಡೆಯಬಹುದು. ಶೀಘ್ರದಲ್ಲೇ ಇದನ್ನು ಬೆಸ್ಕಾಂ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದೆ ಕ್ರಯಪತ್ರ, ನಿರಾಕ್ಷೇಪಣಾ ಪತ್ರ (NOC), ತೆರಿಗೆ ರಶೀದಿ, ನಷ್ಟ ಪರಿಹಾರ ಪತ್ರಗಳಂತಹ ಭೌತಿಕ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಈಗ ಯಾವುದೇ ಕಾಗದಪತ್ರಗಳ ಅಗತ್ಯವಿಲ್ಲ.

ಆನ್‌ಲೈನ್ ಪ್ರಕ್ರಿಯೆಯ ಪ್ರಮುಖ ಅಂಶಗಳು

ಸಂಪೂರ್ಣ ಡಿಜಿಟಲ್:‌ ಬೆಸ್ಕಾಂ RAPDRP Web Self-Service (WSS) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ, ವಿವರಗಳ ಅಪ್‌ಲೋಡ್, ಇ-ಸ್ಟಾಂಪಿಂಗ್ ಮತ್ತು ಇ-ಸೈನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಶುಲ್ಕ ಪಾವತಿ: ರೂ. 100 ಅರ್ಜಿ ಶುಲ್ಕ ಹಾಗೂ ರೂ. 1,194 ಇ-ಸ್ಟಾಂಪ್/ಇ-ಸೈನ್ ಶುಲ್ಕವನ್ನು ಪೋರ್ಟಲ್‌ನಲ್ಲೇ ಪಾವತಿಸಬೇಕು (ನಗದು ಸ್ವೀಕರಿಸುವುದಿಲ್ಲ).

ತಕ್ಷಣದ OM: ಡಿಜಿಟಲ್ ಸಹಿ ಪೂರ್ಣಗೊಂಡ ತಕ್ಷಣ ಅಧಿಕೃತ ದೃಢೀಕರಣ ಪತ್ರವನ್ನು (OM) ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಾಯೋಗಿಕವಾಗಿ ಆರಂಭಗೊಂಡ ದಿನದಿಂದ 31,000ಕ್ಕೂ ಹೆಚ್ಚು ಸಂಪರ್ಕಗಳ ಹೆಸರು ಬದಲಾವಣೆ ಪೂರ್ಣಗೊಂಡಿದ್ದು, ವಾರಕ್ಕೆ 2,000ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗುತ್ತಿವೆ. ಮಾನವ ಹಸ್ತಕ್ಷೇಪವಿಲ್ಲದೆ ಕ್ಷಣಾರ್ಧದಲ್ಲಿ ಈ ಸೇವೆ ದೊರೆಯಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.‌ ಶಿವಶಂಕರ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular