HomeLatest Newsವಿಶ್ವಕಪ್‌ಗೆ ಮುನ್ನ ಆಫ್ರಿಕನ್ ಕದನ: ಇಂದಿನಿಂದ ಆರಂಭವಾಗಲಿದೆ ಮೂರು ದೇಶಗಳ ನಡುವೆ ಐತಿಹಾಸಿಕ ಟಿ20 ತ್ರಿಕೋನ...

ವಿಶ್ವಕಪ್‌ಗೆ ಮುನ್ನ ಆಫ್ರಿಕನ್ ಕದನ: ಇಂದಿನಿಂದ ಆರಂಭವಾಗಲಿದೆ ಮೂರು ದೇಶಗಳ ನಡುವೆ ಐತಿಹಾಸಿಕ ಟಿ20 ತ್ರಿಕೋನ ಸರಣಿ

2027ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಜಂಟಿ ಆಯೋಜನೆಗೆ ಪೂರ್ವಭಾವಿಯಾಗಿ, ಆಫ್ರಿಕಾ ಖಂಡದ ಮೂರು ಬಲಶಾಲಿ ತಂಡಗಳಾದ ನಮೀಬಿಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆ ಐತಿಹಾಸಿಕ ಟಿ20 ತ್ರಿಕೋನ ಸರಣಿ ಆಯೋಜನೆಯಾಗಿದೆ. 2003ರ ನಂತರ ಆಫ್ರಿಕಾ ಮಣ್ಣಿಗೆ ಏಕದಿನ ವಿಶ್ವಕಪ್ ಮರಳುತ್ತಿದ್ದು, ಅದಕ್ಕೂ ಮುನ್ನ ನಡೆಯುತ್ತಿರುವ ಈ ಸರಣಿಯು ಪ್ರಮುಖ ಮೈಲಿಗಲ್ಲಾಗಲಿದೆ.

ಈ ಮೂರು ದೇಶಗಳು ಟಿ೨೦ ಮಾದರಿಯಲ್ಲಿ ತ್ರಿಕೋನ ಸರಣಿ ಆಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಸರಣಿಯ ಎಲ್ಲಾ ಪಂದ್ಯಗಳು ನಮೀಬಿಯಾದ ವಿಂಡ್ಹೋಕ್‌ನಲ್ಲಿರುವ ನಮೀಬಿಯಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಯೋಜನೆಗೊಂಡಿದ್ದು, ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತೀ ತಂಡವು ಉಳಿದ ಎರಡು ತಂಡಗಳ ವಿರುದ್ಧ ಎರಡೆರಡು ಬಾರಿ ಸೆಣಸಾಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಪ್ಟೆಂಬರ್ ೬ ರಂದು ನಡೆಯುವ ಮಹಾಸಮರ (ಫೈನಲ್) ತಲುಪಲಿವೆ.

ಸರಣಿಯ ಸಂಪೂರ್ಣ ವೇಳಾಪಟ್ಟಿ: ಆಗಸ್ಟ್ ೨೮: ನಮೀಬಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಆಗಸ್ಟ್ ೨೯: ದಕ್ಷಿಣ ಆಫ್ರಿಕಾ ವಿರುದ್ಧ ಜಿಂಬಾಬ್ವೆ ಆಗಸ್ಟ್ ೩೧: ನಮೀಬಿಯಾ ವಿರುದ್ಧ ಜಿಂಬಾಬ್ವೆ ಸೆಪ್ಟೆಂಬರ್ ೧: ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ಸೆಪ್ಟೆಂಬರ್ ೩: ನಮೀಬಿಯಾ ವಿರುದ್ಧ ಜಿಂಬಾಬ್ವೆ ಸೆಪ್ಟೆಂಬರ್ ೪: ನಮೀಬಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಸೆಪ್ಟೆಂಬರ್ ೬: ಫೈನಲ್ ಪಂದ್ಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸರಣಿಗಾಗಿ ಆಯಾ ದೇಶಗಳು ಬಲಶಾಲಿ ತಂಡಗಳನ್ನು ಪ್ರಕಟಿಸಿವೆ. ನಮೀಬಿಯಾ ತಂಡವನ್ನು ಗೇರ್ಹಾರ್ಡ್ ಎರಾಸ್ಮಸ್ ಮುನ್ನಡೆಸುತ್ತಿದ್ದರೆ, ಜಿಂಬಾಬ್ವೆ ತಂಡದ ಸಾರಥ್ಯವನ್ನು ಅನುಭವಿ ಆಲ್‌ರೌಂಡರ್ ಸಿಕಂದರ್ ರಝಾ ವಹಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಬ್ಯೋರ್ನ್ ಫಾರ್ಚುಯಿನ್ ನಾಯಕತ್ವದಲ್ಲಿ ಯುವ ಮತ್ತು ಭರವಸೆಯ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ. ಭಾರತದಲ್ಲಿ ಈ ಪಂದ್ಯಗಳ ನೇರ ಪ್ರಸಾರವನ್ನು ಫ್ಯಾನ್‌ಕೋಡ್ (FanCode) ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular