ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 2026ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 520 ಹುದ್ದೆಗಳಿದ್ದು, ಇಂಜಿನಿಯರಿಂಗ್ ಪದವೀಧರರು ಮಾತ್ರವಲ್ಲ ಬಿಎ, ಬಿಕಾಂ, ಬಿಎಸ್‌ಸಿ ಪದವೀಧರರಿಗೂ ತರಬೇತಿ ಪಡೆಯುವ ಅವಕಾಶವಿದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರು ಅಥವ ಒಂದು ವರ್ಷಕ್ಕೂ ಹೆಚ್ಚು ಕೆಲಸದ ಅನುಭವ ಇರುವವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ.
ಅಭ್ಯರ್ಥಿಗಳ ಆಯ್ಕೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಮೆರಿಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಪ್ರತಿ ತಿಂಗಳು ಸರ್ಕಾರದಿಂದ ಸ್ಟೈಫಂಡ್ ಸಿಗಲಿದೆ. ಈ ತರಬೇತಿ ಅವಧಿ ಒಂದು ವರ್ಷಗಳು.
ಅರ್ಜಿ ಸಲ್ಲಿಕೆ ವಿವರ: ಫೆಬ್ರವರಿ 12ರಿಂದ ಮಾರ್ಚ್ 2ರ ತನಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಅರ್ಜಿ ಶುಲ್ಕ ಪಾವತಿ ಮಾಡಲು ಮಾರ್ಚ್ 2 ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಪದವೀಧರ ಅಪ್ರೆಂಟಿಸ್ (ಇಂಜಿನಿಯರಿಂಗ್‌ಯೇತರ) –315 ಹುದ್ದೆಗಳು, ಪದವೀಧರ ಅಪ್ರೆಂಟಿಸ್ (ಇಂಜಿನಿಯರಿಂಗ್) – 130 ಹುದ್ದೆಗಳು, ಡಿಪ್ಲೊಮಾ ಅಪ್ರೆಂಟಿಸ್ – 75 ಹುದ್ದೆಗಳು ಸೇರಿ ಒಟ್ಟು 520 ಹುದ್ದೆಗಳು.
ಪದವೀಧರ ಅಪ್ರೆಂಟಿಸ್ (ಇಂಜಿನಿಯರಿಂಗ್‌ಯೇತರ) ಹುದ್ದೆಗಳಿಗೆ ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಬಿಎಂ (ಯಾವುದೇ ಪದವಿ). ಪದವೀಧರ ಅಪ್ರೆಂಟಿಸ್ (ಇಂಜಿನಿಯರಿಂಗ್) ಹುದ್ದೆಗಳಿಗೆ ಬಿಇ/ ಬಿಟೆಕ್ (ಎಲೆಕ್ಟ್ರಿಕ್ & ಎಲೆಕ್ಟ್ರಾನಿಕ್ಸ್). ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಎಲ್ಲಾ ವಿಭಾಗದ ಡಿಪ್ಲೊಮಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಪದವೀಧರ ಅಪ್ರೆಂಟಿಸ್ (ಇಂಜಿನಿಯರಿಂಗ್‌ಯೇತರ) – 9008 ರೂ.ಗಳು
- ಪದವೀಧರ ಅಪ್ರೆಂಟಿಸ್ (ಇಂಜಿನಿಯರಿಂಗ್) – 9008 ರೂ.ಗಳು
- ಡಿಪ್ಲೊಮಾ ಅಪ್ರೆಂಟಿಸ್ – 8000 ರೂ.ಗಳು
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪದವಿ ಅಥವ ಡಿಪ್ಲೊಮಾ ಪದವಿ ಪಡೆದಿರಬೇಕು. ಹಳೆಯ ಬ್ಯಾಚ್ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ. 2021ರ ನಂತರ ಪದವಿ ಪಡೆದವರು/ ಉತ್ತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ, ಅಧಿಸೂಚನೆ ಇಲ್ಲಿದೆ https://bescom.karnataka.gov.in/126/training/en

