HomeKarnatakaಬೆಂಗಳೂರಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇಪಾಳಿ ಯುವತಿಯರ ಶವ ಪತ್ತೆ ಪ್ರಕರಣಕ್ಕೆ ಬಿಗ್...

ಬೆಂಗಳೂರಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇಪಾಳಿ ಯುವತಿಯರ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ಒಂದೇ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ನೇಪಾಳ ಮೂಲದ ಇಬ್ಬರು ಯುವತಿರು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಲಿಂಗ ಪ್ರೀತಿಗೆ ಕುಟುಂಬದವರು ಒಪ್ಪದ ಕಾರಣಕ್ಕೆ ಇಬ್ಬರೂ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಯಲಹಂಕದ ಶಿವನಹಳ್ಳಿಯಲ್ಲಿ ಆಗಸ್ಟ್ 6ರಂದು ನೇಪಾಳ ಮೂಲದ ಇಬ್ಬರು ಯುವತಿಯರ ಶವ ಒಂದೇ ಮರದಲ್ಲಿ ಒಂದೇ ಸೀರೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಸಿರ್ಜನಾ (22) ಮತ್ತು ರೀಟಾ (23) ಮೃತ ಯುವತಿಯರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರೂ ಬೆಂಗಳೂರಿನಲ್ಲಿ ಬೇರೆ ಬೇರೆ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರೂ ಸಂಬಂಧಿಕರಾಗಿದ್ದು, ಚಿಕ್ಕಂದಿನಿಂದಲೂ ಸ್ನೇಹಿತೆಯರಾಗಿದ್ದರು. ಬರಬರುತ್ತಾ ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಇಬ್ಬರ ನಡುವೆ ಪರಸ್ಪರ ಪ್ರೀತಿಶುರುವಾಗಿತ್ತು.

ಇಬ್ಬರ ನಡುವೆ ಸಂಲಿಂಗ ಪ್ರೀತಿ ಆರಂಭವಾಗಿದ್ದರಿಂದ ಇದಕ್ಕೆ ಕುಟುಂಬದವರ ವಿರೋಧವಿತ್ತು. ಇಬ್ಬರ ಕುಟುಂಬದವರೂ ಮದುವೆಗೆ ಒತ್ತಾಯಿಸಿದ್ದರು. ಇಬ್ಬರೂ ಬೇರೆ ಬೇರೆ ಕಡೆ ವಾಸವಾಗಿದ್ದರಿಂದ ವಾರಕ್ಕೆ ಒಮ್ಮೆ ಭೇಟಿಯಾಗುತ್ತಿದ್ದರು. ಈ ನಡುವೆ ಕುಟುಂಬದಿಂದ ಮದುವೆಗೆ ಒತ್ತಡ ಹೆಚ್ಚಾಗಿತ್ತು. ಇದರಿಂದ ಇಬ್ಬರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.

ಆತ್ಮಹತ್ಯೆ ಘಟನೆಗೂ ಮುನ್ನಾ ದಿನ ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ಹೊರ ಹೋಗಿ ಸಂಜೆ ಬರುವುದಾಗಿ ಹೇಳಿ ಬಂದಿದ್ದರು. ಬಳಿಕ ಇಬ್ಬರೂ ಯಲಹಂಕದ ಶಿವನಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರುದಿನ ಬೆಳಗ್ಗೆ ಸಾರ್ವಜನಿಕರು ಇಬ್ಬರೂ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಯಲಹಂಕ ಓಲ್ಡ್ ಟೌನ್ ಪೊಲೀಸರು ತನಿಖೆ ನಡೆಸಿ, ಕುಟುಂಬದವರನ್ನು ವಿಚಾರಿಸಿದಾಗ ವಿಷಯ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular