HomeKarnatakaBREAKING: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

BREAKING: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಬೆಂಗಳೂರಿನ ಮಡಿವಾಳದಲ್ಲಿ ಈ ಘಟನೆ ನಡೆದಿದೆ.

ಸರ್ಜಾಪುರ ರಸ್ತೆಯಲ್ಲಿರಿವ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಲಾಗಿದೆ. ಹೈನಾಸ್ ಅತ್ಯಾಚಹರವೆಸಗಿರುವ ಆರೋಪಿ. ವಿದ್ಯಾರ್ಥಿನಿ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ವೇಳೆ ಮೋಮೋಸ್ ಮಾರಾಟ ಮಾಡುತ್ತಿದ್ದಳು. ಮೋಮೋಸ್ ಅಂಗಡಿ ಮಾಲೀಕ ತನ್ನ ಅಂಗಡಿ ಮಾರಾಟಕ್ಕೆ ಮುಂದಾಗಿದ್ದ.

ಘೋಷ ಹಾಗೂ ಅತುಲ್ ಎಂಬುವವರು ಮೋಮೋಸ್ ಅಂಗಡಿ ಮಾರಾಟಕ್ಕೆ ಮುಂದಾಗಿದ್ದರು, ಹೈನಾಸ್ ಎಂಬಾತ ಮಧ್ಯವರ್ತಿಯಾಗಿ ಬಂದಿದ್ದ. ಈ ವೇಳೆ ಅಂಗಡಿ ಮಾಲೀಕರು, ಹೈನಾಸ್ ಹಾಗೂ ಯುವತಿ ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಘೋಷ್ ಹಾಗೂ ಅತುಲ್ ಊಟ ತರಲೆಂದು ಹೊರಗೆ ಹೋಗಿದ್ದರು. ಈ ವೇಳೆ ಹೈನಾಸ್ ಯುವತಿ ಮೇಲೆ ಜ್ಯೂಸ್ ಚಲ್ಲಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಅತ್ಯಾಚಾರವೆಸಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಸಂತ್ರಸ್ತ ಯುವತಿ ಮಡಿವಾಳ ಠಾಣೆಯಲ್ಲಿ ದೂರು ನೀಡಲು ಹೋದಾಗ ಅಲ್ಲಿನ ಪೊಲೀಸರು ಯುವತಿಯನ್ನೇ ಹೀಯಾಳಿಸಿದ್ದಾರಂತೆ ಇದರಿಂದ ನೊಂದ ಯುವತಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular