ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಿಚಿತ ಗ್ಯಾಂಗ್ ವೊಂದು ಬುಲೆರೋ ವಾಹನದಲ್ಲಿ ಮನೆಗಳ ಮುಂದೆ ಓಡಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬನಶಂಕರಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬೊಲೆರೋ ವಾಹನದಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶ ನೋಂದಣಿ ಹೊಂದಿರುವ ಬುಲೆರೋ ವಾಹನ ಇದಾಗಿದ್ದು, ರಸ್ತೆಯಲ್ಲಿ ತೆರಳುತ್ತಿರುವ ಬೊಲೆರೋ ವಾಹನ ಮನೆಯೊಂದರ ಗೇಟ್ ಬಳಿ ಶಾಲಾ ಬಾಲಕಿ ಕಾಣುತ್ತಿದ್ದಂತೆ ನಿಂತಿದೆ. ಬಳಿಕ ಹಿಮ್ಮುಖವಾಗಿ ಹೋಗಿ ಬಾಲಕಿ ಬಳಿ ವಾಹನದಲ್ಲಿದ್ದವರು ಮಾತನಾಡಿದ್ದಾರೆ. ಈ ವೇಳೆ ಆಕೆ ಮನೆಯವರನ್ನು ಕರೆದಿದ್ದು, ಅವರು ವಿಚಾರಿಸುತ್ತಿದ್ದಂತೆ ವಾಹನ ಸಮೇತ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ.
ಸಾಅಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಿ ಅಪರಿಚಿತ ಗ್ಯಾಂಗ್ ಅನುಮಾನಾಸ್ಪದವಾಗಿ ಓಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

