HomeKarnatakaಪ್ರವಾಸದಿಂದ ವಾಪಾಸ್ ಆದ ಉದ್ಯಮಿ ಕುಟುಂಬಕ್ಕೆ ಬಿಗ್ ಶಾಕ್: ಮನೆಯಲ್ಲಿದ್ದ 1.37 ಕೋಟಿ ಮೌಲ್ಯದ ಚಿನ್ನಾಭರಣ...

ಪ್ರವಾಸದಿಂದ ವಾಪಾಸ್ ಆದ ಉದ್ಯಮಿ ಕುಟುಂಬಕ್ಕೆ ಬಿಗ್ ಶಾಕ್: ಮನೆಯಲ್ಲಿದ್ದ 1.37 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಕೆಲಸದವರು

ಬೆಂಗಳೂರು: ಹೊಸ ವರ್ಷಾಚರಣೆಗೆಂದು ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರು ಮೂಲದ ಉದ್ಯಮಿ ಕುಟುಂಬ ಮನೆಗೆ ವಾಪಾಸ್ ಆದಾಗ ಮನೆಯಲ್ಲಿದ್ದ ಚಿನ್ನಾಭರಣ, ವಸ್ತುಗಳು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಉದ್ಯಮಿ ಅಭಿಷೇಕ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆ ಕೆಲಸಕ್ಕಿದ್ದವರಿಂದಲೇ ಈ ಕೃತ್ಯ ನಡೆದಿದೆ. ಉದ್ಯಮಿ ಕುಟುಂಬ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗುವಾಗ ಮನೆ ಕೆಲಸದವ ಬಳಿ ಮನೆ ಕೀ ಕೊಟ್ಟು ಹೋಗಿದ್ದು, ಮನೆಗೆ ವಾಪಾಸ್ ಆಗುವಷ್ಟರಲ್ಲಿ ಮನೆಯಲ್ಲಿದ್ದ ಬರೋಬ್ಬರಿ 1.37 ಕೋಟಿ ಮೌಲ್ಯದ ಚಿನ್ನಾಭರಣ, ವಾಚ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.

1.37 ಕೋಟಿ ಮೌಲ್ಯದ ಚಿನ್ನಾಭರಣ, 10 ಲಕ್ಷ ಬೆಲೆ ಬಾಳುವ ವಾಚ್ ಕಳ್ಳತನವಾಗಿದೆ. ಕಳ್ಳತನದ ಬಳಿಕ ಮನೆ ಕೆಲಸಕ್ಕಿದ್ದ ದಂಪತಿ ನಾಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಹಾಜಿರ ಬೇಗಂ ಹಾಗೂ ಆಕೆಯ ಪತಿ ಶಾಹಿರ್ 2022ರಿಂದ 2024ರವರೆಗೆ ಅಭಿಷೇಕ್ ಮನೆಯಲ್ಲಿ ಕೆಲಸಕ್ಕೆ ಇದ್ದರು. ಬಳಿಕ ಕೆಲಸ ಬಿಟ್ಟಿದ್ದರು. ಈಗ 2025 ಡಿಸೆಂಬರ್ 27ರಂದು ಮತ್ತೆ ಅಭಿಷೇಕ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅಭಿಷೇಕ್ ಹಾಗೂ ಕುಟುಂಬ ಹೊಸ ವರ್ಷಾಚರಣೆಗೆ ಡಿ.30ರಂದು ಕೊಯಮತ್ತೂರ್ ಗೆ ಪ್ರವಾಸಕ್ಕೆ ಹೋಗಿತ್ತು. ಈ ವೇಳೆ ಮನೆಯ ಕೀಯನ್ನು ತನ್ನ ಅತ್ತೆಗೆ ಕೊಡುವಂತೆ ಹೇಳಿ ಅಭಿಷೇಕ್ ಹಾಜಿರ ದಂಪತಿಗೆ ಒಂದು ಕೀ ಕೊಟ್ಟು ಹೋಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಯಮತ್ತೂರ್ ನಿಂದ ಕರೆ ಮಾಡಿದಾಗ ಹಾಜಿರ ದಂಪತಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೀ ಅಭಿಷೇಕ್ ಅತ್ತೆಗೆ ತಲುಪಿರಲಿಲ್ಲ. ಕಾರಿನ ಡ್ರೈವರ್ ಗೆ ಕರೆ ಮಾಡಿ ಮನೆ ಬಳಿ ಕಳುಹಿಸಿದಾಗ ಮನೆ ಬಾಗಿಲು ತೆರೆದಿರುವುದು, ಕಬೋರ್ಡ್, ಬೀರು ಓಪನ್ ಆಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಕೆಲಸದ ಹಾಜಿರ ದಂಪತಿ ಮೇಲೆ ಅನುಮಾನ ವ್ಯಕ್ತವಾಗಿದ್ದು,ಅಭಿಷೇಕ್ ಕುಟುಂಬ ದೂರು ನೀಡಿದೆ. ಮನೆ ಕೆಲಸದವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular