ಬೆಂಗಳೂರು: ಬೆಂಗಳೂರಿನ ಎಸ್ಜಿ ಪಾಳ್ಯದಲ್ಲಿ ಸಾರ್ವಜನಿಕ ರಸ್ತೆ ಬದಿ ಕಸ ಸುರಿದು ಪರಿಸರ ಮಾಲಿನ್ಯ ಮಾಡುತ್ತಿದ್ದ ಪಿಜಿಯೊಂದಕ್ಕೆ ಬಿಬಿಎಂಪಿ ಮಾರ್ಷಲ್ಗಳು ಮತ್ತು ಜಿಬಿಎ (GBA) ಅಧಿಕಾರಿಗಳು ಬರೋಬ್ಬರಿ 40 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಹೌದು. ಅಲ್ಲಲ್ಲಿ ಕಸ ಸುರಿಯುವವರ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನಗರದ ಎಸ್ಜಿ ಪಾಳ್ಯದಲ್ಲಿ ಪಿಜಿಯೊಂದಕ್ಕೆ ಬರೋಬ್ಬರಿ 40 ಸಾವಿರ ರೂ. ದಂಡ ವಿಧಿಸಲಾಗಿದೆ.
ಎಸ್ಜಿ ಪಾಳ್ಯದಲ್ಲಿ ರಸ್ತೆ ಬದಿ ಬೇಕಾಬಿಟ್ಟಿಯಾಗಿ ನಿರಂತರವಾಗಿ ತ್ಯಾಜ್ಯ ಸುರಿದು ಬ್ಲಾಕ್ ಸ್ಪಾಟ್ ಮಾಡಿದ್ದ ‘ಫೋರಂ ಪಿಜಿ ಫಾರ್ ಜೆಂಟ್ಸ್’ ಮಾಲೀಕರಿಗೆ ಮಾರ್ಷಲ್ಗಳು ದಂಡ ವಿಧಿಸಿ ಸ್ವಚ್ಛತಾ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದ್ದಾರೆ. ಸಾರ್ವಜನಿಕ ರಸ್ತೆಗಳು ಕಸ ಸುರಿಯುವ ಡಂಪಿಂಗ್ ಯಾರ್ಡ್ಗಳಲ್ಲ, ಸಾರ್ವಜನಿಕರು ಮತ್ತು ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಕಸ ವಿಲೇವಾರಿ ನಿಯಮಗಳನ್ನು ಪಾಲಿಸಬೇಕು ಎಂದು ಜಿಬಿಎ (GBA) ತಿಳಿಸಿದೆ.
ಸಾರ್ವಜನಿಕ ರಸ್ತೆಗಳು ಕಸ ಹಾಕುವ ಜಾಗವಲ್ಲ. ವಾಣಿಜ್ಯ ಸಂಸ್ಥೆಗಳು ಮತ್ತು ಸಾರ್ವಜನಿಕರು ಕಸ ವಿಲೇವಾರಿ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

